ಜಿಲ್ಲೆ

ಉತ್ತಮ ತುರ್ತು ಸ್ಪಂದನಾ ಅಧಿಕಾರಿಗಳು

ರಮೇಶ ಜಹಗೀರದಾರ್

ದಾವಣಗೆರೆ : ರಾಜ್ಯ ಪೊಲೀಸ್ ತುರ್ತು ಸ್ಪಂದನಾ ವ್ಯವಸ್ಥೆಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ಜಿಲ್ಲೆಯ ಮೂವರು 112  ಹೊಯ್ಸಳ ಸಿಬ್ಬಂದಿ ಕಳೆದ ನವೆಂಬರ್ ತಿಂಗಳ ಕಾರ್ಯ ನಿರ್ವಹಣೆಗಾಗಿ ಉತ್ತಮ ತುರ್ತು ಸ್ಪಂದನಾ ಅಧಿಕಾರಿಗಳೆಂಬ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.  ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಮಾಲತೇಶ್, ಜಿಲ್ಲಾ ಸಶಸ್ತ್ರ ಮೀಸಲು ಪಡೆ ದಾವಣಗೆರೆ ಘಟಕದ ಪೊಲೀಸ್ ಕಾನ್‌ಸ್ಟೇಬಲ್ ವಿನೋದ್ ಕುಮಾರ, ಜಿಲ್ಲಾ ನಿಸ್ತಂತು ವಿಭಾಗದ ಹೆಡ್ ಕಾನ್ಸ್‌ಟೇಬಲ್ ಸಂತೋಷ್ ಈ ಗೌರವ ಪಡೆದವರು.  ತುರ್ತು ಸ್ಪಂದನಾ ವ್ಯವಸ್ಥೆಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ರಾಜ್ಯಮಟ್ಟದಲ್ಲಿ ಪ್ರತಿ ತಿಂಗಳು ಪ್ರಧಾನ ಕಚೇರಿಯಿಂದ ಉತ್ತಮ ತುರ್ತು ಸ್ಪಂದನಾ ಅಧಿಕಾರಿ ಎಂದು ಗುರುತಿಸಲಾಗುತ್ತದೆ. ಈ ಸಿಬ್ಬಂದಿಗೆ ಡಿಜಿ, ಐಜಿಪಿ ಅಲೋಕ್ ಮೋಹನ್ ಅವರು ಪ್ರಶಂಸನಾ ಪತ್ರದ ಜತೆಗೆ ಮೂವರು ಸಿಬ್ಬಂದಿಗೆ ತಲಾ 5 ಸಾವಿರ ರೂ. ನಗದು ಬಹುಮಾನ ನೀಡಿದ್ದಾರೆ.  ಈ ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಶುಕ್ರವಾರ, ಎಸ್ಪಿ ಉಮಾ ಪ್ರಶಾಂತ್ ಅಭಿನಂದಿಸಿದರು. ಪೊಲೀಸ್ ನಿರೀಕ್ಷಕಿ ತೇಜಾವತಿ ಹಾಗೂ ಸಿಬ್ಬಂದಿ ಇದ್ದರು.