ಜಿಲ್ಲೆ

ದಾವಣಗೆರೆಯಲ್ಲಿ ಐಟಿ ಕೇಂದ್ರ ಸ್ಥಾಪಿಸಲು ಆಗ್ರಹ

ರಮೇಶ ಜಹಗೀರದಾರ್

ದಾವಣಗೆರೆ  ನಗರದಲ್ಲಿ ಮಾಹಿತಿ ತಂತ್ರಜ್ಞಾನ ಕೇಂದ್ರ ಸ್ಥಾಪನೆ ಮಾಡುವಂತೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.  ಲೋಕಸಭೆಯಲ್ಲಿ ಬುಧವಾರ ಮಾತನಾಡಿ, ದಾವಣಗೆರೆ ನಗರ ಕರ್ನಾಟಕ ರಾಜ್ಯದ ಮಧ್ಯ ಕೇಂದ್ರವಾಗಿದ್ದು, ಇಲ್ಲಿ ಐಟಿ ಹಬ್ ಸ್ಥಾಪನೆಗೆ ಬೇಕಾದ ಎಲ್ಲ ಮೂಲಸೌಲಭ್ಯ ದೊರೆಯಲಿವೆ ಎಂದು ಅಂಕಿ ಅಂಶ ಸಮೇತ ಸರ್ಕಾರದ ಗಮನ ಸೆಳೆದರು.  ಮಾಹಿತಿ ತಂತ್ರಜ್ಞಾನ ಅಭಿವೃದ್ಧಿ ಕೇಂದ್ರವಾಗುವ ಸಾಮರ್ಥ್ಯ ದಾವಣಗೆರೆ ಹೊಂದಿದೆ. ಪ್ರವರ್ಧಮಾನಕ್ಕೆ ಬರುತ್ತಿರುವ ಐಟಿ ವ್ಯವಹಾರವನ್ನು ಹೊಸ ಕೇಂದ್ರವಾಗಿ ಕೊಂಡೊಯ್ಯಲು ಇದು ಸೂಕ್ತ ತಾಣ ಎಂದರು.  ಬೆಂಗಳೂರಿನಿಂದ ರಸ್ತೆ ಮತ್ತು ರೈಲಿನ ಮೂಲಕ ಇದು 3.5ರಿಂದ 4 ಗಂಟೆಗಳಾಗಿದ್ದು, ರಾಷ್ಟ್ರೀಯ ಹೆದ್ದಾರಿಯಿಂದ ಸಂಪರ್ಕ ಹೊಂದಿದೆ ಮತ್ತು ಹುಬ್ಬಳ್ಳಿಯು 2 ಗಂಟೆಗಳು, ಶಿವಮೊಗ್ಗ 1 ಗಂಟೆ ದೂರದಲ್ಲಿದೆ. ಶಿವಮೊಗ್ಗ ಮತ್ತು ಹುಬ್ಬಳ್ಳಿಯಲ್ಲಿ ವಿಮಾನ ನಿಲ್ದಾಣವೂ ಇದೆ ಎಂದು ಮಾಹಿತಿ ನೀಡಿದರು.  ನಗರದ ಕೈಗಾರಿಕಾ ಪ್ರದೇಶಗಳಲ್ಲಿ ಸಾವಿರಾರು ನೋಂದಾಯಿತ ಕೈಗಾರಿಕೆಗಳಿವೆ. ದೊಡ್ಡ ಪ್ರಮಾಣದ ಮತ್ತು ಸಾರ್ವಜನಿಕ ವಲಯದ ಉದ್ಯಮಳಿವೆ. ಸುತ್ತಮುತ್ತ ಹಲವು ಇಂಜಿನಿಯರಿಂಗ್ ಕಾಲೇಜುಗಳಿದ್ದು, ವಾರ್ಷಿಕವಾಗಿ ಸಾವಿರಕ್ಕೂ ಹೆಚ್ಚು ಪದವೀಧರರು ಹೊರಬರುತ್ತಿದ್ದಾರೆ ಎಂದು ಹೇಳಿದರು.  ಮೊದಲ ಹಂತದಲ್ಲಿ ಸ್ಮಾರ್ಟ್ ಸಿಟಿಗಳಲ್ಲಿ ಒಂದೆಂದು ಹೆಸರಿಸಲ್ಪಟ್ಟ ದಾವಣಗೆರೆ ಎಸ್ಟಿಪಿಐನಿಂದ ಉಪ ಕೇಂದ್ರಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ. ಎಸ್ಟಿಪಿಐ ಸಾಮರ್ಥ್ಯ ಮತ್ತು ಕರ್ನಾಟಕದ ಮಹತ್ವದ ಐಟಿ ಹಬ್‌ಗಳಲ್ಲಿ ಒಂದಾಗಿ ಹೊರಹೊಮ್ಮುವ ಅಗತ್ಯತೆ ಅರಿವನ್ನು ತೆಗೆದುಕೊಂಡಿದೆ.  ಎಸ್ಟಿಪಿಐ ಸರ್ಕಾರದ ಬೆಂಬಲದೊಂದಿಗೆ. ಕರ್ನಾಟಕ ರಾಜ್ಯವು ತನ್ನ 5ನೇ ಖಐ ಕೇಂದ್ರವನ್ನು ಕರ್ನಾಟಕ ರಾಜ್ಯ ಮುಕ್ತ ವಿವಿ ಸ್ಥಾಪಿಸಿದೆ. ಇದು ಐಐಛಿಖ ಮತ್ತು ಉಖಈ ವಲಯದಲ್ಲಿ ಸೂಕ್ಷ್ಮ ಮತ್ತು ಸಣ್ಣ ಸ್ಟಾರ್ಟ್ ಆಪ್‌ಗಳಿಗೆ ಸಂಪನ್ಮೂಲ ಕೇಂದ್ರವಾಗಿದೆ ಎಂದು ತಿಳಿಸಿದರು.  ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ಜೀವನ ವೆಚ್ಚವು ಗಮನಾರ್ಹವಾಗಿ ಕಡಿಮೆಯಾಗಿದೆ. ಜೀವನದ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಇದು ಪರಿಪೂರ್ಣ ವ್ಯವಹಾರ ಮತ್ತು ಉದ್ಯೋಗಿಯನ್ನಾಗಿ ಮಾಡುತ್ತದೆ. ಸ್ಟಾರ್ಟ್‌ಅಪ್‌ಗಳು ಮತ್ತು ಟೆಕ್ ಕಂಪನಿಗಳಿಂದ ಹೊಸತನವನ್ನು ಉತ್ತೇಜಿಸಲು ನಗರವು ಪರಿಪೂರ್ಣವಾಗಿದೆ.  ದಾವಣಗೆರೆಯನ್ನು ಐಟಿ ಕೇಂದ್ರವನ್ನಾಗಿ ಮಾಡುವುದರಿಂದ ಪ್ರಾದೇಶಿಕ ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ. ಹುಬ್ಬಳ್ಳಿ, ಧಾರವಾಡ, ಹಾವೇರಿ, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಿಂದ ಬೆಂಗಳೂರಿಗೆ ಇಂಜಿನಿಯರಿಂಗ್ ಪದವೀಧರರ ನಗರ ವಲಸೆಯನ್ನು ಕಡಿಮೆಗೊಳಿಸುತ್ತದೆ ಮತ್ತು ರಾಜಧಾನಿಯಲ್ಲಿ ಜನದಟ್ಟಣೆ ತಪ್ಪಿಸಲು ಸಹಾಯವಾಗಲಿದೆ ಎಂದರು.