ಜಿಲ್ಲೆ

33 ಅಭ್ಯರ್ಥಿಗಳ ಉಮೇದುವಾರಿಕೆ ಸಿಂಧು

ದಾವಣಗೆರೆ : ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಗೆ 33 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಹೇಳಿದ್ದಾರೆ.
 ಉಮೇದುವಾರಿಕೆ ಸಲ್ಲಿಸಲು ಶುಕ್ರವಾರ ಕೊನೆಯ ದಿನವಾಗಿತ್ತು. ಒಟ್ಟು 40 ಅಭ್ಯರ್ಥಿಗಳಿಂದ 54 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅವುಗಳ ಪರಿಶೀಲನೆಯು ಚುನಾವಣಾ ವೀಕ್ಷಕಿ ಎಂ.ಲಶ್ಮಿ ಹಾಗೂ ಅಭ್ಯರ್ಥಿಗಳ ಸಮ್ಮುಖದಲ್ಲಿ ನಡೆಯಿತು.
 ಒಟ್ಟು ಸಲ್ಲಿಕೆಯಾದ 54 ನಾಮಪತ್ರಗಳಲ್ಲಿ 42 ಕ್ರಮಬದ್ಧವಾಗಿದ್ದು 12 ಉಮೇದುವಾರಿಕೆ ತಿರಸ್ಕರಿಸಲಾಗಿದೆ. ನಾಮಪತ್ರ ಸಲ್ಲಿಸಿದ 40 ಅಭ್ಯರ್ಥಿಗಳಲ್ಲಿ 7 ಜನರ ಉಮೇದುವಾರಿಕೆ ಸಂಪೂರ್ಣವಾಗಿ ತಿರಸ್ಕೃತವಾಗಿವೆ.
 ...
 * ನಾಮಪತ್ರ ತಿರಸ್ಕೃತಗೊಂಡವರು
 ಜಿ.ಪಿ. ರಾಘವೇಂದ್ರ (ಕೆ.ಆರ್.ಎಸ್ ಪಕ್ಷ), ಸುಭಾನ್ ಖಾನ್, ಸಿ.ಎಂ. ಮಂಜುನಾಥ ಸ್ವಾಮಿ, ಎಂ. ರಂಗನಾಥಸ್ವಾಮಿ, ಬಿ.ಆರ್. ಪ್ರಸನ್ನ, ಕರನಂ ಕೊಟ್ರಪ್ಪ (ಪಕ್ಷೇತರ ಅಭ್ಯರ್ಥಿಗಳು) ಮತ್ತು ಬಿಜೆಪಿಯಿಂದ ಪರ್ಯಾಯ ಅಭ್ಯರ್ಥಿಯಾಗಿ ಸಲ್ಲಿಸಿದ್ದ ಜಿ.ಎಂ. ಸಿದ್ದೇಶ್ವರ ಅವರ ಸಂಪೂರ್ಣ ಉಮೇದುವಾರಿಕೆ ತಿರಸ್ಕರಿಸಲಾಗಿದೆ.
 ...