ದಾವಣಗೆರೆ : ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಜಿ.ಬಿ. ವಿನಯ ಕುಮಾರ್, 56.21 ಕೋಟಿ ರೂ. ಆಸ್ತಿ ಹೊಂದಿದ್ದಾರೆ.
ಜಿಲ್ಲಾ ಚುನಾವಣಾಧಿಕಾರಿಗೆ ಅವರು ಶುಕ್ರವಾರ ನಾಮಪತ್ರದ ಜತೆಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ವಿವರಗಳನ್ನು ನೀಡಿದ್ದಾರೆ.
ಚರಾಸ್ತಿ 9.07 ಕೋಟಿ ರೂ, ಸ್ಥಿರಾಸ್ತಿ 47.14 ಕೋಟಿ ರೂ. ಇದೆ. ಕೈಯಲ್ಲಿರುವ ನಗದು 1.75 ಲಕ್ಷ ರೂ, ಬ್ಯಾಂಕ್ ಸೇರಿ ಹಲವು ಸಂಸ್ಥೆಗಳಲ್ಲಿ ಇರಿಸಿರುವ ಠೇವಣಿ 4.20 ಕೋಟಿ ರೂ.
ಅವರು 92.50 ಎಕರೆ ಜಮೀನಿಗೆ ಮಾಲೀಕರಾಗಿದ್ದು ಅದರ ಮೌಲ್ಯ 14.41 ಕೋಟಿ ರೂ. ಆಗಿದೆ. ಬ್ಯಾಂಕ್ ಮತ್ತಿತರೆ ಸಂಸ್ಥೆಗಳಿಂದ 9.58 ಕೋಟಿ ರೂ.ಗಳ ಸಾಲ ಹೊಂದಿದ್ದಾರೆ. ಜಿ.ಎಸ್.ಟಿ., ಪಾಲಿಕೆ ತೆರಿಗೆ ಸೇರಿ ಒಟ್ಟಾರೆ ಸರ್ಕಾರಕ್ಕೆ 1.31 ಕೋಟಿ ರೂ.ಗಳ ಪಾವತಿ ಬಾಕಿ ಇದೆ. ಇವರು ಬಿ.ಎಸ್.ಸಿ. ಪದವೀಧರ.