ದಾವಣಗೆರೆ : ಭಾನುವಾರದಿಂದ ಫೆ. 26 ರ ವರೆಗೆ ಹರಿಯಾಣದಲ್ಲಿ ನಡೆಯುವ 37ನೇ ಜೂನಿಯರ್ ರಾಷ್ಟ್ರೀಯ ನೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುವ ರಾಜ್ಯ ತಂಡಕ್ಕೆ ಜಿಲ್ಲಾ ನೆಟ್ಬಾಲ್ ಸಂಸ್ಥೆಯಿಂದ ನಾಲ್ವರು ಆಟಗಾರರು ಆಯ್ಕೆಯಾಗಿದ್ದಾರೆ. ಬಾಲಕರ ತಂಡಕ್ಕೆ ಆದಿತ್ಯ ಪ್ರವೀಣ್ ಅನ್ವೇಕರ್ ಮತ್ತು ಕೆ.ಎಂ. ಹರ್ಷಿಲ್, ಬಾಲಕಿಯರ ತಂಡಕ್ಕೆ ಜಿ. ಫ್ಲೇವಿ ಹಾಗೂ ವಿ. ಅನಘಾ ಆಯ್ಕೆಯಾದವರು. ಈ ಕ್ರೀಡಾಪಟುಗಳ ಸಾಧನೆಯ ಬಗ್ಗೆ ಜಿಲ್ಲಾ ನೆಟ್ಬಾಲ್ ಸಂಸ್ಥೆಯ ಕಾರ್ಯದರ್ಶಿ ಆರ್. ವೀರೇಶ್, ತರಬೇತಿದಾರ ಆರ್. ದರ್ಶನ್ ಹಾಗೂ ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.