ದಾವಣಗೆರೆ : ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವ ಉದ್ದೇಶದ ವಿಕಸಿತ ಭಾರತ ಸಂಕಲ್ಪ ಯಾತ್ರೆಯು ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ 17 ಸ್ಥಳಗಳಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದ್ದಾರೆ.
ಯಾತ್ರೆಯು ನ. 17 ರಿಂದ ದೇಶಾದ್ಯಂತ ನಡೆಯುತ್ತಿದೆ. ನಗರದಲ್ಲಿ ಯಾತ್ರೆ ನಡೆಯುವ ಸ್ಥಳಗಳಲ್ಲಿ ಆರೋಗ್ಯ ತಪಾಸಣೆ, ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಒದಗಿಸುವುದು, ಆಯುಷ್ಮಾನ್ ಕಾರ್ಡ್ ನೀಡುವ ಚಟುವಟಿಕೆಯನ್ನೂ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ಮನವಿ ಮಾಡಿದ್ದಾರೆ.
ನಗರದ ಡಿಸಿಎಂ ಲೇಔಟ್, ನಿಟ್ಟುವಳ್ಳಿ, ವಿದ್ಯಾರ್ಥಿ ಭವನ, ಎ.ವಿ.ಕೆ. ಕಾಲೇಜು ರಸ್ತೆ, ರಾಂ ಆ್ಯಂಡ್ ಕೋ ವೃತ್ತ, ಜಯದೇವ ವೃತ್ತ, ಕೆ.ಆರ್. ಮಾರ್ಕೆಟ್ ಸರ್ಕಲ್, ಮಂಡಿಪೇಟೆ, ವಿಜಯಲಕ್ಷ್ಮೀ ರಸ್ತೆ, ಕಾಳಿಕಾದೇವಿ ರಸ್ತೆ, ಎಸ್.ಪಿ.ಎಸ್. ನಗರ, ಎಸ್.ಎಂ. ಕೃಷ್ಣ ನಗರ, ವಿನೋಬ ನಗರ, ಶಾಮನೂರು ಆಂಜನೇಯ ದೇವಸ್ಥಾನ, ಆಂಜನೇಯ ಬಡಾವಣೆ, ಹರಿಹರ ನಗರ, ಮಲೇಬೆನ್ನೂರು, ಚನ್ನಗಿರಿ ಪಟ್ಟಣ ಸೇರಿ ಹಲವೆಡೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದ್ದಾರೆ.