ಜಿಲ್ಲೆ

ದಾವಣಗೆರೆ ಬಗ್ಗೆ ಬಹಳ ಪ್ರೀತಿ ಬಂದಂತಿದೆ

ರಮೇಶ ಜಹಗೀರದಾರ್

ದಾವಣಗೆರೆ : ಮಾಜಿ ಸಂಸದರಿಗೆ ದಾವಣಗೆರೆ ಜಿಲ್ಲೆಯ ಬಗ್ಗೆ ಬಹಳ ಪ್ರೀತಿ ಬಂದಂತಿದೆ. ಎಲ್ಲ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ವ್ಯಂಗ್ಯವಾಡಿದರು.  ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಭದ್ರಾ ಬಲದಂಡೆ ನಾಲೆಯನ್ನು ಸೀಳಿ ನೀರು ಪೂರೈಸುವ ಯೋಜನೆ ಬಿಜೆಪಿ ಸರ್ಕಾರ ಇದ್ದಾಗಲೇ ಮಂಜೂರಾಗಿತ್ತು. ಈ ವಿಚಾರವಾಗಿ ರಾಜಕೀಯ ತರುವುದು ಬೇಡ ಎಂದರು.  ಕೇಂದ್ರದ ಗೃಹ ಸಚಿವ ಅಮಿತ್ ಷಾ, ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯಿಸಿ, ‘ಒಳ್ಳೆಯ ಕೆಲಸ ಮಾಡಿದವರ ಬಗ್ಗೆ ಒಳ್ಳೇ ಅಭಿಪ್ರಾಯವೇ ಬರುತ್ತದೆ. ಮಾಜಿಗಳ ಬಗ್ಗೆ ಅವರು ಈ ಮಾತು ಹೇಳುತ್ತಾರೆಯೆ’ ಎಂದು ಪ್ರಶ್ನಿಸಿದರು.  ‘ಶಾಮನೂರು ಮನೆತನಕ್ಕೆ ಅಧಿಕಾರವನ್ನು ಮತ್ತೆ ಬಿಟ್ಟು ಕೊಟ್ಟಿದ್ದೀರಿ. ಸಮಾಜದವರು ಅವರ ಪರವಾಗಿ ನಿಲ್ಲುತ್ತಾರೆ ಎಂದು ಅವರು ಹೆದರಿದ್ದಾರೆ’ ಎಂದರು.  ಭದ್ರಾ ವಿಚಾರವಾಗಿ ಸಂಬಂಧಿಸಿದ ಸಚಿವರೊಂದಿಗೆ ಮಾತನಾಡಿದ್ದೇನೆ. ಶೀಘ್ರವೇ ಸಭೆ ಕರೆದು ಅಧಿಕಾರಿಗಳೊಂದಿಗೆ ಚರ್ಚಿಸಿ ಉಪಾಯ ಹುಡುಕೋಣ. ಅಚ್ಚುಕಟ್ಟು ಭಾಗಕ್ಕೆ ಹೆಚ್ಚು ನೀರು ತರುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.