ದಾವಣಗೆರೆ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಸದಸ್ಯತ್ವ ಅಭಿಯಾನದ ಪೋಸ್ಟರ್‌ಗಳನ್ನು ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಗುರುವಾರ ಸಂಜೆ ಅನಾವರಣಗೊಳಿಸಿದರು.
ಅಭಿಯಾನಕ್ಕೆ ಚಾಲನೆ ನೀಡಿದ ನಂತರ ದಾವಣಗೆರೆ ಜಿಲ್ಲಾ ಯುವ ಘಟಕದ ಈ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಜಿಲ್ಲೆಯಲ್ಲಿ ಅತಿ ಹೆಚ್ಚು ವೀರಶೈವ ಲಿಂಗಾಯತ ಸಮಾಜದವರು ನೆಲೆಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ನೋಂದಣಿ ಮಾಡಿಸಬೇಕು ಎಂದು ಸೂಚಿಸಿದರು.
ರಾಷ್ಟ್ರೀಯ ಉಪಾಧ್ಯಕ್ಷ ಅಣಬೇರು ರಾಜಣ್ಣ, ಯುವ ಉದ್ಯಮಿ ಸಮರ್ಥ ಶಾಮನೂರು, ಕುರುಡಿ ಗಿರೀಶ್, ಯುವ ಘಟಕದ ಜಿಲ್ಲಾಧ್ಯಕ್ಷ ಶಂಭು ಉರೇಕೊಂಡಿ, ಕಾರ್ಯದರ್ಶಿಗಳಾದ ಜೆ. ಶಿವರಾಜ್, ಶಿವರತನ್, ಅಜಿತ್ ಆಲೂರ್, ನಿಧಿರಾಜ್ ಐನಳ್ಳಿ, ಕಾರ್ತಿಕ್ ಹಿರೇಮಠ್, ಅನಿಲ್ ಕುಮಾರ್ ಇದ್ದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಚುನಾವಣೆ- 2024 ರಲ್ಲಿ ಸ್ಪರ್ಧಿಸಲು ಮತ್ತು ಭಾಗವಹಿಸಬೇಕಾದರೆ ಮಹಾಸಭೆಯ ಸದಸ್ಯತ್ವ ಪಡೆಯಲು ಜೂನ್ 5 ಕೊನೆಯ ದಿನವಾಗಿದೆ. ಆಸಕ್ತರು ಈ ಅವಕಾಶವನ್ನು ಸದುಪಯೋಗಡಿಸಿಕೊಂಡು ಮಹಾಸಭೆಯ ಸದಸ್ಯತ್ವವನ್ನು ಪಡೆದುಕೊಳ್ಳಲು ಕೋರಲಾಗಿದೆ.
ಸದಸ್ಯತ್ವ ಪಡೆಯಲು ಅಜಿತ್ ಆಲೂರ್ : 9740592627, ಶಿವರತನ್ : 9380321543 ಅವರನ್ನು ಸಂಪರ್ಕಿಸಬಹುದು.