ಜಿಲ್ಲೆ

ಚುನಾವಣಾ ಫಲಿತಾಂಶದ ಪರಾಮರ್ಶೆ ಸಭೆ

ರಮೇಶ ಜಹಗೀರದಾರ್

ದಾವಣಗೆರೆ : ಕಾಂಗ್ರೆಸ್‌ನ ನೂತನ ಸಂಸದರು ಹಾಗೂ ಲೋಕಸಭಾ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಗಳ ಜತೆಗೆ ಎಐಸಿಸಿ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಚುನಾವಣಾ ಫಲಿತಾಂಶದ ಪರಾಮರ್ಶೆ ಸಭೆಯಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ನೂತನ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಭಾಗವಹಿಸಿದ್ದರು.
 ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇದ್ದ ಸಭೆಯಲ್ಲಿ ರಾಜ್ಯದ ವಿವಿಧ ಲೋಕಸಭಾ ಕ್ಷೇತ್ರಗಳಿಂದ ಆಯ್ಕೆಯಾದವರು ಹಾಗೂ ಪರಾಜಿತರಾದ ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಚುನಾವಣೆಯ ಸೋಲು, ಗೆಲುವಿನ ಬಗ್ಗೆ ಚರ್ಚೆ ನಡೆಯಿತು.
 ರಾಧಾಕೃಷ್ಣ ದೊಡ್ಡಮನಿ, ಅಂಜಲಿ ನಿಂಬಾಳ್ಕರ್, ಜಯಪ್ರಕಾಶ ಹೆಗ್ಡೆ, ಮುದ್ದ ಹನುಮೇಗೌಡ, ಸಂಯುಕ್ತಾ ಪಾಟೀಲ್, ಸ್ಟಾರ್ ಚಂದ್ರು, ಮನ್ಸೂರ್ ಅಲಿ ಖಾನ್, ಗೌತಮ್, ಮೃಣಾಲ್ ಹೆಬ್ಬಾಳ್ಕರ್, ಆನಂದ ಗಡ್ಡದೇವರಮಠ ಇದ್ದರು. ಇದೇ ವೇಳೆ ಡಾ. ಪ್ರಭಾ ಮಲ್ಲಿಕಾರ್ಜುನ್, ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದರು.