ಜಿಲ್ಲೆ

ಎಸ್‌ಎಸ್‌ಐಎಂಎಸ್‌ಗೆ ರ‌್ಯಾಂಕ್‌ಗಳ ಗರಿ

ದಾವಣಗೆರೆ :  ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ 2024-25 ನೇ ಸಾಲಿನಲ್ಲಿ ನಡೆದ ಪರೀಕ್ಷೆಗಳಲ್ಲಿ ನಗರದ ಎಸ್.ಎಸ್. ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ವಿದ್ಯಾರ್ಥಿಗಳು ಅತ್ಯುತ್ತಮ ರ‌್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.  ಎಂ.ಡಿ (ತುರ್ತು ಔಷಧ) ಪರೀಕ್ಷೆಯಲ್ಲಿ ಡಾ.ಪಿ.ಕೆ. ಅರವಿಂದ 5 ನೇ ರ‌್ಯಾಂಕ್, ಎಂ.ಎಸ್. (ಪ್ರಸೂತಿ ಮತ್ತು ಸ್ತ್ರೀರೋಗ)  ವಿಭಾಗದಲ್ಲಿ ಡಾ. ಜಿ.ಆರ್. ವಾರಿಧಿ 3ನೇ ರ‌್ಯಾಂಕ್ ಪಡೆದಿದ್ದಾರೆ.  ಯು.ಜಿ ಹಂತದ ಪರೀಕ್ಷೆಗಳಲ್ಲಿ ಡಾ.ಎಸ್.ಪಿ. ಯುವರಾಜ್ ವೈದ್ಯಕೀಯ ವಿವಿಯ 4ನೇ ಟಾಪರ್ ಆಗಿದ್ದಲ್ಲದೇ ವಿವಿಧ ವಿಭಾಗಗಳಲ್ಲಿ ರ‌್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.  ಪೀಡಿಯಾಟ್ರಿಕ್ ವಿಭಾಗದಲ್ಲಿ ಭಾರ್ಗವಿ 6ನೇ ರ‌್ಯಾಂಕ್, ಅದಿತಿ, ಅಕ್ಷತಾ ಮತ್ತು ಎಚ್.ಎನ್. ಸಹನಾ 8ನೇ ರ‌್ಯಾಂಕ್ ಪಡೆದಿದ್ದಾರೆ.  ಅಂಗ ರಚನಾಶಾಸ್ತ್ರ ವಿಭಾಗದಲ್ಲಿ ಎಂ.ಎಚ್. ಸುಪ್ರಜಾ 10ನೇ ರ‌್ಯಾಂಕ್, ಎನ್. ಸಿಂಧೂ ಅವರು ಶರೀರಶಾಸ್ತ್ರ ವಿಭಾಗದಲ್ಲಿ 9ನೇ ರ‌್ಯಾಂಕ್ ಹಾಗೂ ಸಮುದಾಯ ವಿಭಾಗದಲ್ಲಿ 10ನೇ ರ‌್ಯಾಂಕ್, ನಂದಕಿಶೋರ್ ಬಾಣಾಪುರ ಪೀಡಿಯಾಟ್ರಿಕ್ ವಿಭಾಗದಲ್ಲಿ 5ನೇ ರ‌್ಯಾಂಕ್ ಹಾಗೂ ಮೈಕ್ರೋಬಯಲಾಜಿ ವಿಭಾಗದಲ್ಲಿ 10ನೇ ರ‌್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.  ವಿದ್ಯಾರ್ಥಿಗಳ ಈ ಸಾಧನೆಯ ಬಗ್ಗೆ ಎಸ್.ಎಸ್. ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥ ಹಾಗೂ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಸಂಸ್ಥೆಯ ಪ್ರಾಚಾರ್ಯ ಡಾ.ಬಿ.ಎಸ್. ಪ್ರಸಾದ್, ವೈದ್ಯಕೀಯ ಅಧೀಕ್ಷಕ ಅರುಣ್ ಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ.