ಜಿಲ್ಲೆ

ಜನರ ಮನದಲ್ಲಿ ಉಳಿಯುವ ಕೆಲಸ ಮಾಡಿ

ರಮೇಶ ಜಹಗೀರದಾರ್

ದಾವಣಗೆರೆ : ನಗರದ ಜನರ ಮನಸ್ಸಿನಲ್ಲಿ ಉಳಿಯುವ ರೀತಿಯಲ್ಲಿ ಕೆಲಸ ಮಾಡುವಂತೆ ಎಐಟಿಯುಸಿ ಜಿಲ್ಲಾ ಸಮಿತಿಯ ಮುಖಂಡರು ನೂತನ ಮೇಯರ್ ಕೆ. ಚಮನ್ ಸಾಬ್ ಮತ್ತು ಉಪ ಮೇಯರ್ ಸೋಗಿ ಶಾಂತ ಕುಮಾರ್ ಅವರಿಗೆ ಮನವಿ ಮನವಿ ಮಾಡಿದರು.  ಮೇಯರ್ ಮತ್ತು ಉಪ ಮೇಯರ್ ಮನೆಗೆ ಶನಿವಾರ ಭೇಟಿ ನೀಡಿದ್ದ ಸಂಘಟನೆಯ ಮುಖಂಡರು ನಗರಕ್ಕೆ ಆಗಬೇಕಿರುವ ಹಲವು ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿದರು.  ಎಐಟಿಯುಸಿ ವತಿಯಿಂದ ಈಗಾಗಲೇ ಎಲ್ಲ ಹಂತಗಳಲ್ಲಿ ಒತ್ತಾಯ ಮಾಡಿ ದಾವಣಗೆರೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ ಪಂಪಾಪತಿ ಅವರ ಹೆಸರನ್ನಿಡಲು ಮನವಿ ಸಲ್ಲಿಸಲಾಗಿದ್ದು, ಈ ಕಾರ್ಯಕ್ಕೆ ಕೈಜೋಡಿಸುವಂತೆ ಕೋರಿದರು.  ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಆವರಗೆರೆ ಚಂದ್ರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಜಿ. ಉಮೇಶ್, ಜಿಲ್ಲಾಧ್ಯಕ್ಷ ಕೆ. ರಾಘವೇಂದ್ರ ನಾಯರಿ, ಉಪಾಧ್ಯಕ್ಷ ಟಿ.ಎಸ್. ನಾಗರಾಜ್, ಕಾರ್ಯದರ್ಶಿ ಎಂ.ಬಿ. ಶಾರದಮ್ಮ, ಆವರಗೆರೆ ವಾಸು, ಖಜಾಂಚಿ ನಿಟುವಳ್ಳಿ ಬಸವರಾಜ ಹಾಗೂ ಸಂಘಟನೆಯ ಮುಖಂಡರಾದ ಸರೋಜಾ, ಜಿ. ಯಲ್ಲಪ್ಪ, ವಿ. ಲಕ್ಷ್ಮಣ, ಸಿ. ರಮೇಶ್ ಇದ್ದರು.