ಜಿಲ್ಲೆ

ಜಿಲ್ಲೆಯಾದ್ಯಂತ ಶ್ರದ್ಧಾ ಭಕ್ತಿಯಿಂದ ಮಧ್ವ ನವಮಿ ಆಚರಣೆ

ರಮೇಶ ಜಹಗೀರದಾರ್

ದಾವಣಗೆರೆ : ಜಿಲ್ಲೆಯಾದ್ಯಂತ ಭಾನುವಾರ ಮಧ್ವ ನವಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
 ತಾಲೂಕಿನ ಕಡಲಬಾಳು ಗ್ರಾಮದಲ್ಲಿ ಶ್ರೀ ಹನುಮ, ಭೀಮ, ಮಧ್ವ ಸೇವಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಪಾರ ಭಕ್ತರ ಸಮ್ಮುಖದಲ್ಲಿ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ಇದಕ್ಕೂ ಮೊದಲು ಚಂಡೆ ವಾದ್ಯಗಳ ಸಹಿತ ಪಲ್ಲಕ್ಕಿ ಉತ್ಸವ ನೆರವೇರಿತು.
 ಬೆಳಗ್ಗೆ ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, ವಾಯುಸ್ತುತಿ ಪುನಶ್ಚರಣ ಹಾಗೂ ಶ್ರೀ ರಾಘವೇಂದ್ರ ಅಷ್ಟೋತ್ತರ, ರಥೋತ್ಸವ ಹೋಮವನ್ನು ಆಯೋಜಿಸಲಾಗಿತ್ತು. ಮಧ್ಯಾಹ್ನ ಮಹಾ ಮಂಗಳಾರತಿ ನಂತರ ತೀರ್ಥ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
 ರಥೋತ್ಸವ ಸಂದರ್ಭದಲ್ಲಿ ತಹಸೀಲ್ದಾರ್ ಡಾ.ಎಂ.ಬಿ. ಅಶ್ವಥ್, ಕಂದಾಯ ನಿರೀಕ್ಷಕ ಸಿದ್ದೇಶ್, ಮುಖಂಡರಾದ ಮುದೇಗೌಡ್ರ ಗಿರೀಶ್, ಮಾಗಾನಹಳ್ಳಿ ಪರಶುರಾಮ್, ಟ್ರಸ್ಟ್‌ನ ಎಂ.ವಿ. ರಾಮರಾವ್ ಶಾನುಭೋಗ್, ಕೆ. ಗುರುರಾಜ್, ಕಡೂರು ಪ್ರಾಣೇಶಾಚಾರ್ ಪಾಲ್ಗೊಂಡಿದ್ದರು.
 ಮಧ್ವ ನವಮಿ ಅಂಗವಾಗಿ ಶುಕ್ರವಾರ ರಥಸಪ್ತಮಿಯಂದು ಪೂಜೆ, ಅಭಿಷೇಕ, ಮಣ್ಣೂರು ಗೋಪಾಲಾಚಾರ್ ಅವರಿಂದ ಪ್ರವಚನ ಹಮ್ಮಿಕೊಳ್ಳಲಾಗಿತ್ತು. ಶನಿವಾರ ಭೀಷ್ಮಾಷ್ಟಮಿಯಂದು ಪವಮಾನ ಹೋಮ, ಭಜನೆ, ಕಡೂರು ಪ್ರಾಣೇಶಾಚಾರ್ ಅವರಿಂದ ಪ್ರವಚನ ನಡೆಯಿತು.
 
 * ಸರ್ವಜ್ಞಾಚಾರ್ಯ ಸೇವಾ ಸಂಘ
 ನಗರದ ಲಾಯರ್ ರಸ್ತೆಯಲ್ಲಿರುವ ಸರ್ವಜ್ಞಾಚಾರ್ಯ ಸೇವಾ ಸಂಘದಿಂದ ಮಧ್ವ ನವಮಿ ಮಹೋತ್ಸವದ ಅಂಗವಾಗಿ ಬೆಳಗ್ಗೆ ಶ್ರೀ ಹರಿವಾಯುಸ್ತುತಿ ಪುನಶ್ಚರಣೆ ನಡೆಯಿತು. ಮಧ್ವಾಚಾರ್ಯರ ಸಂದೇಶ ಕುರಿತು ಪಾಂಡುರಂಗಾಚಾರ್ಯ ಮಣ್ಣೂರು ಪ್ರವಚನ ಮಾಡಿದರು. ಗೋಪಾಲಾಚಾರ್ಯ ಮಣ್ಣೂರು ಅವರಿಂದ ಪುರಾಣ ಮಂಗಳೋತ್ಸವ ನೆರವೇರಿತು. ಪ್ರಾಣೇಶ್ ಕಟ್ಟಿ, ನರಸಿಂಹಾಚಾರ್ ನವರತ್ನ, ಮಾಧವ ಪದಕಿ, ಪ್ರಕಾಶ್ ಕುಬೇರ್, ವೆಂಕಟಗಿರಿ ತಾಡಪತ್ರಿ ಪಾಲ್ಗೊಂಡಿದ್ದರು.
  ...
 * ಪಿಜೆ ಬಡಾವಣೆ ರಾಯರ ಮಠ
 ನಗರದ ಪಿ.ಜೆ. ಬಡಾವಣೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಧ್ವ ನವಮಿ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
 ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ ನೆರವೇರಿದವು. ನಂತರ ವೇದ ಪಂಡಿತ ಪುರಂದರಾಚಾರ್ ಹಯಗ್ರೀವ ಅವರಿಂದ ಪ್ರವಚನ ನಡೆಯಿತು. ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ರಥೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು. ನಂತರ ತೀರ್ಥಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
 ಸುತೀರ್ಥ ಕಟ್ಟಿ, ರಾಮಗೋಪಾಲ ಕಟ್ಟಿ, ಶ್ರೀಧರ ಘಟಿಕರ್, ಕೆಎಸ್‌ಎಫ್‌ಸಿ ನಾಗರಾಜ್, ಎಂ. ರಾಧಾ, ಗುರುರಾಜ ಜೋಶಿ, ಜಿ.ಜೆ. ವಿನೋದ್ ಪಾಲ್ಗೊಂಡಿದ್ದರು.