ದಾವಣಗೆರೆ : ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ದೂರಿನ ಹಿನ್ನೆಲೆಯಲ್ಲಿ ಜಿಲ್ಲೆಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಂಕಿತ ಅಧಿಕಾರಿ ಡಾ. ಜೆ.ಎಸ್. ನಾಗರಾಜ ಅವರ ಇಲ್ಲಿನ ಮನೆ, ಕಚೇರಿ ಇನ್ನಿತರ ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಗುರುವಾರ ದಾಳಿ ನಡೆಸಿದರು. ಲೋಕಾಯುಕ್ತ ಎಸ್ಪಿ ಎಸ್.ಎಂ. ಕೌಲಾಪುರೆ ನೇತೃತ್ವದಲ್ಲಿ ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದರು. ನಾಗರಾಜ ಅವರ ಮನೆ, ಕಚೇರಿ, ಫಾರ್ಮ್‌ಹೌಸ್ ಮೇಲೆ ದಾಳಿ ನಡೆಸಲಾಯಿತು. ಕಾರ್ಯಾಚರಣೆ ವೇಳೆ ಒಟ್ಟು 6.14 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. ಅದರಲ್ಲಿ ಸ್ಥಿರಾಸ್ತಿ-1 ನಿವೇಶನ, 4 ಮನೆಗಳು, 3 ಎಕರೆ ಕೃಷಿ ಜಮೀನು (ಒಟ್ಟು 4.49 ಕೋಟಿ ರೂ.) ಇರುವುದು ಬೆಳಕಿಗೆ ಬಂದಿದೆ. ಚರಾಸ್ತಿ-1.17 ಲಕ್ಷ ರೂ. ನಗದು, 94.20 ಲಕ್ಷ ರೂ. ಮೌಲ್ಯದ ಆಭರಣಗಳು, 38.18 ಲಕ್ಷ ರೂ. ಮೌಲ್ಯದ ವಾಹನಗಳು, 32 ಲಕ್ಷ ರೂ. ಮೌಲ್ಯದ ಪೀಠೋಪಕರಣಗಳು (ಒಟ್ಟು 1.65 ಕೋಟಿ ರೂ.) ಪತ್ತೆಯಾಗಿವೆ. ... (ಬಾಕ್ಸ್) ಫ್ರಿಡ್ಜ್‌ನಲ್ಲಿ ಆಹಾರದ ಮಾದರಿಗಳು ಶೋಧ ಕಾರ್ಯಾಚರಣೆ ವೇಳೆ ರೆಫ್ರಿಜರೇಟರ್‌ನಲ್ಲಿ ಆಹಾರದ ಹಲವು ಮಾದರಿಗಳು ಪತ್ತೆಯಾಗಿವೆ. ಅವುಗಳನ್ನು ಯಾವಾಗ ತಂದಿದ್ದು, ಎಲ್ಲಿಯದು ಇನ್ನಿತರ ವಿವರಗಳು ಲಭ್ಯವಾಗಿಲ್ಲ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ. ...