ಜಿಲ್ಲೆ

ಇಸ್ಕಾನ್ ಸಂಸ್ಥೆಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ

ರಮೇಶ ಜಹಗೀರದಾರ್

ದಾವಣಗೆರೆ: ಇಸ್ಕಾನ್ ಸಂಸ್ಥೆ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಸೋಮವಾರ, ಇಲ್ಲಿನ ವಿನೋಬ ನಗರದ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ಇಸ್ಕಾನ್ ಸಂಸ್ಥೆಯ ದಾವಣಗೆರೆ ಶಾಖೆಯ ಮುಖ್ಯಸ್ಥ ಅವಧೂತ ಚಂದ್ರದಾಸ್ ಮಹಾರಾಜ್ ತಿಳಿಸಿದರು.  ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಸಂಜೆ 5ರಿಂದ ರಾತ್ರಿ 12 ಗಂಟೆವರೆಗೆ ಮಹಾ ಮಂಗಳಾರತಿ, ಸಂಕೀರ್ತನೆ, ಭಜನೆ, ಶ್ರೀ ರಾಧಾಕೃಷ್ಣ ಅಭಿಷೇಕ, ನೃತ್ಯ, ಪ್ರವಚನ ಹಾಗೂ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ಮಕ್ಕಳಿಂದ ಬೆಣ್ಣೆ, ಮೊಸರು ತುಂಬಿದ ಮಡಕೆ ಒಡೆಯುವ ಕಾರ್ಯಕ್ರಮ  ನಡೆಯಲಿದೆ ಎಂದು ಎಂದು ಹೇಳಿದರು.  ಆ. 27ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 1 ಗಂಟೆವರೆಗೆ ಶ್ರೀಲ ಪ್ರಭುಪಾದರ ವ್ಯಾಸ ಪೂಜಾ ಮಹೋತ್ಸವ ನಡೆಯಲಿದ್ದು, ಈ ಸಂದರ್ಭ ಕೀರ್ತನೆ, ಭಜನೆ, ನುಡಿನಮನ, ಪ್ರವಚನ, ಪುಷ್ಪಾಂಜಲಿ, ಆರತಿ ಕಾರ್ಯಕ್ರಮವಿದೆ ಎಂದು ವಿವರಿಸಿದರು. ಪಿ. ಸತ್ಯನಾರಾಯಣ ರೆಡ್ಡಿ, ಗೌರ ಹರಿದಾಸ್, ಶ್ರೀಕಾಂತ್ ಸುದ್ದಿಗೋಷ್ಠಿಯಲ್ಲಿದ್ದರು.