ಜಿಲ್ಲೆ

ಚಾವಣಿ ಪದರ ಕಳಚಿ ಬಿದ್ದು ಮೂವರಿಗೆ ಗಾಯ

ದಾವಣಗೆರೆ :  ನಗರದ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ, ಚಾವಣಿಯ ಪದರ ಕಳಚಿಬಿದ್ದು ಮೂವರು ಗಾಯಗೊಂಡಿದ್ದಾರೆ.  ವಿಜಯನಗರ ಜಿಲ್ಲೆಯ ಹಲವಾಗಲು ಗ್ರಾಮದ ಕಾವೇರಿ, ಪ್ರೇಮಾ ಹಾಗೂ ಎರಡೂವರೆ ವರ್ಷದ ಮಗು ನೇತ್ರಾ ಗಾಯಗೊಂಡವರು. ತುರ್ತು ಚಿಕಿತ್ಸಾ ಘಟಕದ ಸಮೀಪ ಈ ಅವಘಡ ನಡೆದಿದೆ. ಮೂವರಿಗೂ ಚಿಕ್ಕ ಗಾಯಗಳಾಗಿದ್ದು, ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಬಂಧಿಯೊಬ್ಬರನ್ನು ನೋಡಲು ಬಂದಿದ್ದಾಗ ಈ ಘಟನೆ ನಡೆದಿದೆ. ಸಮೀಪದಲ್ಲೇ ಇದ್ದ ಇವರಿಗೆ ಪದರದ ಚೂರುಗಳು ಸಿಡಿದು ಗಾಯಗಳಾಗಿವೆ ಎಂದು ಮೂಲಗಳು ಮಾಹಿತಿ ನೀಡಿವೆ.