ದಾವಣಗೆರೆ : ನಗರದ ಪಿ.ಜೆ. ಬಡಾವಣೆ ರಾಯರ ಮಠದಲ್ಲಿ ಉತ್ತರಾರಾಧನೆ ಅಂಗವಾಗಿ ಗುರುವಾರ ಧನ್ವಂತರಿ ಹೋಮವನ್ನು ಆಯೋಜಿಸಲಾಗಿತ್ತು. ಡಾ. ವೆಂಕಟರಮಣ ಮತ್ತು ಡಾ.ಪ್ರಿಯಾ ಅವರ ಸಮ್ಮುಖದಲ್ಲಿ ಹಾಗೂ ವೇದ ಪಂಡಿತ ಜಯತೀರ್ಥಾಚಾರ್ ವಡೇರ್ ಪೌರೋಹಿತ್ಯದಲ್ಲಿ ಹೋಮವು ನೆರವೇರಿತು. ಶ್ರೀ ಸತ್ಯನಾರಾಯಣ ಪೂಜೆಯನ್ನು ಜಿ.ಜೆ. ವಿನೋದ್ ಮತ್ತು ಶ್ರೀದೇವಿ ಅವರ ಉಪಸ್ಥಿತಿಯಲ್ಲಿ ನಗರದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಅರ್ಚಕ ಶಿವಕುಮಾರ ಭಟ್ ನೇತೃತ್ವದಲ್ಲಿ ನಡೆಸಲಾಯಿತು. ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ಗುರು ಸ್ತೋತ್ರ ಪಾರಾಯಣ ಹಾಗೂ ರಾಯರಿಗೆ ಫಲ ಪಂಚಾಮೃತ ಅಭಿಷೇಕ ನಡೆಯಿತು. ನಂತರ ಪುಷ್ಪಾಲಂಕಾರ ಸೇವೆ, ಹಸ್ತೋದಕ ಹಾಗೂ ತೀರ್ಥ ಪ್ರಸಾದ, ಸಂಜೆ ಪಲ್ಲಕ್ಕಿ ಉತ್ಸವ, ಅಷ್ಟಾವಧಾನ, ತೊಟ್ಟಿಲು ಪೂಜೆ ಹಾಗೂ ಮಹಾ ಮಂಗಳಾರತಿ ನೆರವೇರಿಸಲಾಯಿತು.