ಜಿಲ್ಲೆ

ಶಾಮನೂರು ಅನಾರೋಗ್ಯ, ಆಸ್ಪತ್ರೆಗೆ ದಾಖಲು

ರಮೇಶ ಜಹಗೀರದಾರ್

ದಾವಣಗೆರೆ : ಕಾಂಗ್ರೆಸ್‌ನ ಹಿರಿಯ ಶಾಸಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ವಯೋಸಹಜ ಅನಾರೋಗ್ಯದಿಂದ ಬೆಂಗಳೂರಿನ ಸ್ಪರ್ಶ ಆಸ್ಪತ್ರೆಗೆ ದಾಖಲಾಗಿದ್ದಾರೆ.
 ಕಳೆದ ಎರಡು ದಿನಗಳಿಂದ ಅವರಿಗೆ ಸುಸ್ತಾಗಿತ್ತು. ನಗರದಲ್ಲಿ ಶುಕ್ರವಾರ ಅವರನ್ನು ತಪಾಸಣೆಗೆ ಒಳಪಡಿಸಿದಾಗ ಹೃದಯ ಬಡಿತ ತುಸು ಕಡಿಮೆಯಾಗಿತ್ತು. ವೈದ್ಯರು ತಾತ್ಕಾಲಿಕ ಪೇಸ್‌ಮೇಕರ್ ಅಳವಡಿಸಿದ ನಂತರ ಹೃದಯ ಬಡಿತ ಸಹಜ ಸ್ಥಿತಿಗೆ ಮರಳಿತು ಎಂದು ಮೂಲಗಳು ತಿಳಿಸಿವೆ.
 ನಂತರ ಅವರನ್ನು ಕಾರಿನಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಅವರಿಗೆ ಶಾಶ್ವತ ಪೇಸ್‌ಮೇಕರ್ ಅಳವಡಿಸಲಾಗುವುದು. ಇದು ವಯೋಸಹಜ ಆರೋಗ್ಯ ಸಮಸ್ಯೆಯಾಗಿದೆ. ಅವರು ಮಾತನಾಡುತ್ತಿದ್ದು ಆತಂಕಪಡುವ ಅಗತ್ಯವಿಲ್ಲ. ಒಂದೆರಡು ದಿನಗಳಲ್ಲಿ ಅವರು ದಾವಣಗೆರೆಗೆ ವಾಪಸಾಗಲಿದ್ದಾರೆ ಎಂದು ತಿಳಿದು ಬಂದಿದೆ.
 ...
 (ಬಾಕ್ಸ್)
 ಸಚಿವ ಎಸ್‌ಎಸ್‌ಎಂ ಆರೋಗ್ಯವಾಗಿದ್ದಾರೆ
  ವದಂತಿ ಸತ್ಯಕ್ಕೆ ದೂರ
 ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ಶುಕ್ರವಾರ ಸುದ್ದಿ ಪ್ರಸಾರವಾಗಿದ್ದು ಇದು ಸತ್ಯಕ್ಕೆ ದೂರವಾಗಿದೆ ಎಂದು ಕಾಂಗ್ರೆಸ್ ಯುವ ಮುಖಂಡ ಕೆ.ಎಲ್. ಹರೀಶ್ ಬಸಾಪುರ ಸ್ಪಷ್ಟೀಕರಣ ನೀಡಿದ್ದಾರೆ.
 ಅವರು ಆರೋಗ್ಯವಾಗಿದ್ದು ಆ ರೀತಿಯ ಯಾವುದೆ ಘಟನೆ ನಡೆದಿಲ್ಲ ಎಂದು ಪಕ್ಷದ ಮುಖಂಡರು, ಕಾರ್ಯಕರ್ತರು, ಎಸ್.ಎಸ್.ಎಂ ಅಭಿಮಾನಿಗಳು ಹಾಗೂ ಸಾರ್ವಜನಿಕರ ಗಮನಕ್ಕೆ ತರಲು ಬಯಸುತ್ತಿದ್ದೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 ...