ದಾವಣಗೆರೆ : ಕಾಂಗ್ರೆಸ್‌ನ ಹಿರಿಯ ಶಾಸಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಅವರ ಆರೋಗ್ಯದಲ್ಲಿ ಚೇತರಿಕೆಯಾಗಿದೆ.
ಬೆಂಗಳೂರಿನ ಸ್ಪರ್ಶ ಆಸ್ಪತ್ರೆಗೆ ದಾಖಲಾಗಿರುವ ಅವರಿಗೆ ಶನಿವಾರ ಶಾಶ್ವತ ಪೇಸ್‌ಮೇಕರ್ ಅಳವಡಿಸಲಾಯಿತು. ಅವರು ಚೇತರಿಸಿಕೊಂಡಿದ್ದು ಆಬ್ಸರ್ವೇಶನ್ ಮಾಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಎರಡು ದಿನಗಳಿಂದ ಸುಸ್ತಾಗಿದ್ದ ಡಾ. ಶಾಮನೂರು ಶಿವಶಂಕರಪ್ಪ ಅವರನ್ನು ಶುಕ್ರವಾರ ನಗರದಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಹೃದಯ ಬಡಿತ ತುಸು ಕಡಿಮೆಯಾಗಿತ್ತು. ವೈದ್ಯರು ತಾತ್ಕಾಲಿಕ ಪೇಸ್‌ಮೇಕರ್ ಅಳವಡಿಸಿದ ನಂತರ ಹೃದಯ ಬಡಿತ ಸಹಜ ಸ್ಥಿತಿಗೆ ಮರಳಿತ್ತು.