ಜಿಲ್ಲೆ

ಕೇಂದ್ರದ ಸುರಕ್ಷಿತ ಹೂಡಿಕೆಯ ಯೋಜನೆ

ರಮೇಶ ಜಹಗೀರದಾರ್

ದಾವಣಗೆರೆ : ಅಂಚೆ ಇಲಾಖೆ ಗಣೇಶ ಚತುರ್ಥಿ ಪ್ರಯುಕ್ತ ಗ್ರಾಹಕರಿಗೆ ಸೆ.15 ರವರೆಗೆ ಸಾವರಿನ್ ಗೋಲ್ಡ್ ಬಾಂಡ್ ಖರೀದಿಸಲು ಅವಕಾಶ ನೀಡಿದೆ ಎಂದು ನಗರದ ಎಸ್.ಎಸ್. ಲೇಔಟ್ ಅಂಚೆ ಕಚೇರಿ ಉಪ ಅಂಚೆಪಾಲಕ ಎ.ಆರ್.ಹರೀಶ್ ಹೇಳಿದರು.
 ನಗರದಲ್ಲಿ ಸೋಮವಾರ ಗ್ರಾಹಕರಿಗೆ ಬಾಂಡ್ ವಿತರಿಸಿ ಮಾತನಾಡಿದ ಅವರು, ಸೆ.11 ರಿಂದ ಬಾಂಡ್ ಮಾರಾಟ ಆರಂಭವಾಗಿದೆ. ಒಂದು ಗ್ರಾಂ.ಗೆ 5923 ರೂ.ದರದಂತೆ ಗ್ರಾಹಕರು ಚಿನ್ನದ ಬಾಂಡ್ ಖರೀದಿಸಬಹುದು. ಈ ಹೂಡಿಕೆ ಮೇಲೆ 6 ತಿಂಗಳಿಗೊಮ್ಮೆ ಶೇ.2.5 ಬಡ್ಡಿ ದೊರೆಯಲಿದೆ ಎಂದು ತಿಳಿಸಿದರು.
 ಕೇಂದ್ರ ಸರ್ಕಾರ ನಾಗರಿಕರಿಗೆ ಒದಗಿಸಿರುವ ಸುರಕ್ಷಿತ ಹಣ ಹೂಡಿಕೆಯ ಯೋಜನೆಯಾಗಿದೆ. ಮಾಹಿತಿಗೆ ದಾವಣಗೆರೆ ಕೇಂದ್ರ ಅಂಚೆ ಕಚೇರಿಯ ಬಿ. ಸಂತೋಷ್‌ಕುಮಾರ್ ಅವರನ್ನು ಸಂಪರ್ಕಿಸಬಹುದು ಎಂದರು.