ಜಿಲ್ಲೆ

ಜಿಎಂಐಟಿಯಲ್ಲಿ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ

ರಮೇಶ ಜಹಗೀರದಾರ್

ದಾವಣಗೆರೆ: ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಇನ್‌ಫಾರ್ಮೇಷನ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ವಿಭಾಗದಿಂದ ನ. 11-16ರ ವರೆಗೆ ಅಟಲ್ ಪ್ರಾಯೋಜಿತ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಎಂ ವಿಶ್ವವಿದ್ಯಾಲಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಡಾ. ಟಿ.ಎಂ. ವೀರಗಂಗಾಧರಸ್ವಾಮಿ ಹೇಳಿದರು.  ಆರು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳು ಸೈಬರ್ ಭದ್ರತೆ ಕುರಿತು  ಮಾಹಿತಿ ನೀಡಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.  ನವದೆಹಲಿಯ ಎಐಸಿಟಿ ವತಿಯಿಂದ ಕಾರ್ಯಕ್ರಮಕ್ಕೆ 3.5 ಲಕ್ಷ ರೂ. ಬಿಡುಗಡೆಯಾಗಿದ್ದು, ದೇಶದ ವಿವಿಧ ಕಾಲೇಜುಗಳ 40 ಅಧ್ಯಾಪಕರು ಹಾಗೂ ಜಿಎಂಐಟಿ ಕಾಲೇಜಿನ 10 ಅಧ್ಯಾಪಕರು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದರು.  ನ. 11ರ ಬೆಳಗ್ಗೆ 9ಕ್ಕೆ ಜಿ.ಎಂ. ಹಾಲಮ್ಮ ಸಭಾಂಗಣದಲ್ಲಿ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದೆ  ತುಮಕೂರಿನ ಎಸ್‌ಜೆಸಿಐಟಿ ಕಾಲೇಜಿನ ಪ್ರಾಚಾರ್ಯ ಡಾ.ಜಿ.ಟಿ. ರಾಜು ಭಾಗವಹಿಸಲಿದ್ದಾರೆ ಎಂದು ಹೇಳಿದರು.  ಕಾರ್ಯಕ್ರಮದ ಸಂಯೋಜಕಿ ಸೌಮ್ಯಾ ಎತ್ತಿನಹಳ್ಳಿ, ಟಿ.ಆರ್. ತೇಜಸ್ವಿ ಕಟ್ಟಿಮನಿ ಸುದ್ದಿಗೋಷ್ಠಿಯಲ್ಲಿದ್ದರು.