ಜಿಲ್ಲೆ

ಜಿಲ್ಲೆಯಲ್ಲಿ 700ಕ್ಕೂ ಹೆಚ್ಚು ಗಣೇಶ ಮೂರ್ತಿಗಳ ವಿಸರ್ಜನೆ

ದಾವಣಗೆರೆ  : ಡಿಜೆಗಳ ಆರ್ಭಟ, ಕಿವಿಗಡಚಿಕ್ಕುವ ಅಬ್ಬರದ ಸಂಗೀತ, ಶಬ್ದ ಮಾಲಿನ್ಯದ ಆತಂಕ ಯಾವುದೂ ಅಲ್ಲಿರಲಿಲ್ಲ. ಬದಲಾಗಿ ಸಾಂಪ್ರದಾಯಿಕ ವಾದ್ಯಗಳ ಲಯಬದ್ಧ ಸ್ವರ ಕೇಳಿಬಂದಿತು. ನಿಜವಾದ ಭಕ್ತಿಯ ಹೊಳೆ ಹರಿಯಿತು.  ಗಣೇಶೋತ್ಸವದ ಮೂರನೇ ದಿನವಾದ ಶುಕ್ರವಾರ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆಯಲ್ಲಿ ಕಂಡುಬಂದ ದೃಶ್ಯವಿದು. ಜಿಲ್ಲಾಡಳಿತ ಡಿಜೆ ನಿಷೇಧಿಸಿದ ಹಿನ್ನೆಲೆಯಲ್ಲಿ ಎಲ್ಲಿಯೂ ಅವುಗಳ ಬಳಕೆ ಕಾಣಲಿಲ್ಲ. ಕಲಾ ತಂಡಗಳಿಗೆ ಅಲ್ಲಿ ಅವಕಾಶವಾಗಿತ್ತು.  ಜಿಲ್ಲೆಯಲ್ಲಿ ಶುಕ್ರವಾರ 700ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಯಿತು. ಪ್ರತಿಷ್ಠಾಪನೆ ಮಾಡಿದ್ದ ಸ್ಥಳದಿಂದ ವಿಸರ್ಜನೆ ಸ್ಥಳದ ವರೆಗೆ ಸಂಭ್ರಮದ ಮೆರವಣಿಗೆ ನಡೆಯಿತು. ಭಕ್ತರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು.  ಟ್ರಾೃಕ್ಟರ್‌ಗಳಲ್ಲಿ ಗಣೇಶ ಮೂರ್ತಿಯನ್ನಿಟ್ಟು ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಭಕ್ತರು ತಲೆಗೆ ಕೇಸರಿ ರುಮಾಲು ಸುತ್ತಿದ್ದರು. ಭಕ್ತಿ, ಉತ್ಸಾಹದಿಂದ ನರ್ತಿಸಿ ಸಂಭ್ರಮಿಸಿದರು. ಕೆಲವರು ಸೆಲ್ಫಿ ಪಡೆದುಕೊಂಡರು. ಪಾಲಿಕೆಯಿಂದ ವ್ಯವಸ್ಥೆ ಮಾಡಿದ್ದ ನೀರಿನ ತೊಟ್ಟಿಗಳು ಮತ್ತು ಕೃತಕ ಹೊಂಡಗಳಲ್ಲಿ ಮೂರ್ತಿಗಳ ವಿಸರ್ಜನೆ ಮಾಡಲಾಯಿತು. ಪೊಲೀಸರು ಭದ್ರತೆ ಒದಗಿಸಿದ್ದರು.  ...