ಜಿಲ್ಲೆ

ಸಾಫ್ಟ್‌ವೇರ್ ಇಂಜಿನಿಯರ್‌ಗೆ 9 ಲಕ್ಷ ರೂ. ವಂಚನೆ

ರಮೇಶ ಜಹಗೀರದಾರ್

ದಾವಣಗೆರೆ :  ಮ್ಯಾಟ್ರಿಮೋನಿ ಆ್ಯಪ್‌ನಲ್ಲಿ ವಧುವನ್ನು ಹುಡುಕುತ್ತಿದ್ದ ಟೆಕ್ಕಿಯೊಬ್ಬರು ಯುವತಿಯ ಮಾತಿಗೆ ಮರುಳಾಗಿ ನಕಲಿ ಕ್ರಿಪ್ಟೊ ಕರೆನ್ಸಿಯಲ್ಲಿ ಹೂಡಿಕೆ ಮಾಡಿ 9.34 ಲಕ್ಷ ಕಳೆದುಕೊಂಡಿದ್ದಾರೆ.  ನಗರದ ಸಾಫ್ಟ್‌ವೇರ್ ಇಂಜಿನಿಯರ್ ಹಣ ಕಳೆದುಕೊಂಡವರು. ವಂಚಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಸಿ.ಇ.ಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.  ಮ್ಯಾಟ್ರಿಮೋನಿ ಆ್ಯಪ್‌ನಲ್ಲಿ ವಧು ಹುಡುಕುತ್ತಿದ್ದ ಟೆಕ್ಕಿಗೆ ಏ. 24ರಂದು ಯುವತಿಯೊಬ್ಬಳು ಪರಿಚಿತರಾಗಿದ್ದಾರೆ. ಮೂಲತಃ ತಮಿಳುನಾಡಿನವರಾಗಿದ್ದು, ಮಲೇಷ್ಯಾದಲ್ಲಿ ನೆಲೆಸಿರುವುದಾಗಿ ಹೇಳಿಕೊಂಡಿದ್ದಾರೆ.  ಕ್ರಿಪ್ಟೊ ಕರೆನ್ಸಿಯಲ್ಲಿ ಹೂಡಿಕೆ ಮಾಡುವಂತೆ ಟೆಕ್ಕಿಯನ್ನು ಪ್ರೇರೇಪಿಸಿದ್ದಾರೆ. ಯುವತಿಯ ಮಾತು ನಂಬಿದ ಟೆಕ್ಕಿ ಮೇ 4ರಿಂದ 9ರ ಅವಧಿಯಲ್ಲಿ 9.34 ಲಕ್ಷ ಹೂಡಿಕೆ ಮಾಡಿದ್ದಾರೆ. ಶುಲ್ಕದ ಹೆಸರಿನಲ್ಲಿಯೂ ಒಂದಷ್ಟು ಹಣ ಸುಲಿಗೆ ಮಾಡಲಾಗಿದೆ. ಅನುಮಾನಗೊಂಡ ಅವರು ಸ್ನೇಹಿತರ ಬಳಿ ವಿಚಾರಿಸಿದಾಗ ಮೋಸ ಹೋಗಿದ್ದು ಖಚಿತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.