ಜಿಲ್ಲೆ

ಸ್ವಸಹಾಯ ಮಹಿಳಾ ಸಂಘಗಳಿಗೆ ಯಂತ್ರೋಪಕರಣ

ರಮೇಶ ಜಹಗೀರದಾರ್

ದಾವಣಗೆರೆ : ಜಿಎಂಎಚ್ ಚಾರಿಟಿ ಫೌಂಡೇಷನ್‌ನಿಂದ ನಗರದ ಎಂಸಿಸಿ ಎ ಬ್ಲಾಕ್‌ನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಕ್ರಿಯ ಸ್ವಸಹಾಯ ಮಹಿಳಾ ಸಂಘಗಳಿಗೆ ಸ್ಯಾನಿಟರಿ ಪ್ಯಾಡ್ ತಯಾರಿಕಾ ಯಂತ್ರೋಪಕರಣ ವಿತರಿಸಲಾಯಿತು.
 ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಕೂಸಾದ ಮೇಕಿಂಗ್ ಇಂಡಿಯಾ ಅಡಿ ಮತ್ತು ಜಿ.ಮಲ್ಲಿಕಾರ್ಜುನಪ್ಪ ಅವರ 20ನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಫೌಂಡೇಷನ್ ಸಕ್ರಿಯ ಮಹಿಳಾ ಸಂಘಗಳಿಗೆ ಸ್ವಉದ್ಯೋಗ ಸೃಷ್ಟಿಸಿಕೊಳ್ಳಲು ನೆರವಾಗುತ್ತಿದೆ ಎಂದು ಗಾಯತ್ರಿ ಜಿ.ಎಂ.ಸಿದ್ದೇಶ್ವರ್ ತಿಳಿಸಿದರು.
 ಮೊದಲ ಹಂತದಲ್ಲಿ ಜಿಲ್ಲೆಯ ಸಕ್ರಿಯ 20 ಸ್ವಸಹಾಯ ಮಹಿಳಾ ಸಂಘ ಗುರುತಿಸಿದ್ದು, ಪ್ರತಿ ಸಂಘಕ್ಕೆ ಸುಮಾರು 75 ಸಾವಿರ ರೂ.ಗಳ ಸ್ಯಾನಿಟರಿ ಪ್ಯಾಡ್ ತಯಾರಿಕಾ ಯಂತ್ರೋಪಕರಣ ಮತ್ತು 5 ಸಾವಿರ ಸ್ಯಾನಿಟರಿ ಪ್ಯಾಡ್ ತಯಾರಿಕೆಗೆ ಕಚ್ಚಾ ವಸ್ತು ನೀಡಲಾಗುತ್ತಿದೆ. ಇದಕ್ಕಾಗಿ ಸುಮಾರು 15 ಲಕ್ಷ ರೂ. ವ್ಯಯಿಸಲಾಗುತ್ತಿದ್ದು, ಪ್ರತಿ ಮಹಿಳಾ ಸಂಘವು ಇದರ ಸದುಪಯೋಗ ಪಡೆದುಕೊಂಡು ಸ್ವಉದ್ಯೋಗ ನಿರ್ಮಿಸಿಕೊಂಡು ಇತರರಿಗೂ ಉದ್ಯೋಗ ನೀಡಬೇಕು ಎಂದು ಉತ್ತೇಜಿದರು.
 ಜಿ.ಎಂ.ಸಿದ್ದೇಶ್ವರ ಅವರ ಸಹೋದರಿಯರಾದ ಪ್ರಮೀಳಾ ನಟರಾಜ್ ಮತ್ತು ಗಾಯತ್ರಿ ವೈ.ಯು. ಸುಭಾಷ್, ಪಾಲಿಕೆ ಸದಸ್ಯೆ ರೇಖಾ ಸುರೇಶ್ ಇತರರು ಇದ್ದರು.