ಜಿಲ್ಲೆ

ರಾಜ್ಯಮಟ್ಟದ ಫುಟ್‌ಬಾಲ್ ಪಂದ್ಯಾವಳಿ ವಿಜೇತರು

ರಮೇಶ ಜಹಗೀರದಾರ್

ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪ ಅವರ 94ನೇ ವರ್ಷದ ಜನ್ಮದಿನದ ಪ್ರಯುಕ್ತ ಈಚೆಗೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಅಂತರ ಶಾಲಾ-ಕಾಲೇಜು ಫುಟ್‌ಬಾಲ್ ಪಂದ್ಯಾವಳಿಯಲ್ಲಿ 17 ವರ್ಷದ ಬಾಲಕರ ವಿಭಾಗದಲ್ಲಿ ರಾಣೇಬೆನ್ನೂರು ನಾಗಶಾಂತಿ ಉನ್ನತಿ ಪಿಯು ಕಾಲೇಜು ಪ್ರಥಮ ಹಾಗೂ ಬೆಳಗಾವಿ ಲಿಂಗರಾಜ ಪಿಯು ಕಾಲೇಜು ದ್ವಿತೀಯ ಸ್ಥಾನ ಪಡೆದಿವೆ.

15 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಬೆಳಗಾವಿಯ ಸೇಂಟ್ ಕ್ಸೇವಿಯರ್ಸ್ ಪ್ರಥಮ, ರಾಣೆಬೆನ್ನೂರು ಡಿ-ಯುನೈಟೆಡ್ ಫುಟ್‌ಬಾಲ್ ಅಕಾಡೆಮಿ ದ್ವಿತೀಯ ಹಾಗೂ ಬಾಲಕಿಯರ ವಿಭಾಗದಲ್ಲಿ ರಾಣೇಬೆನ್ನೂರು ಡಿ-ಯುನೈಟೆಡ್ ಫುಟ್ಬಾಲ್ ಅಕಾಡೆಮಿ ಪ್ರಥಮ ಮತ್ತು ಶಿವಮೊಗ್ಗ ತಂಡ ದ್ವಿತೀಯ ಸ್ಥಾನ ಗಳಿಸಿವೆ.

ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ಇಂತಹ ಕ್ರೀಡಾ ಚಟುವಟಿಕೆಗಳು ರಾಜ್ಯಾದ್ಯಂತ ಹೆಚ್ಚು ಪಂದ್ಯಾವಳಿ ನಡೆದರೆ ಕ್ರೀಡಾಪಟುಗಳಿಗೆ ಸಹಕಾರಿಯಾಗಲಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದ ಪಂದ್ಯಾವಳಿ ಏರ್ಪಡಿಸಲು ಅಸೋಸಿಯೇಷನ್‌ಗೆ ತಿಳಿಸಿದರು.

ಜಿಲ್ಲಾ ಫುಟ್‌ಬಾಲ್ ಅಸೋಸಿಯೇಷನ್ ಪದಾಧಿಕಾರಿಗಳಾದ ಅಲ್ಲಾವಲಿ ಮುಜಾಹಿದ್ ಖಾನ್, ಜಿ.ಬಿ.ಮೊಹಮ್ಮದ್ ರಫೀಕ್ ಎಸ್.ಕೆ. ಚಂದ್ರಶೇಖರ, ಡೇವಿಡ್, ನಾಗೇಶ್, ಪ್ರವೀಣ್ ಇತರರು ಇದ್ದರು.