ಜಿಲ್ಲೆ

ಗುಜರಿ ಗೋಡೌನ್‌ನಲ್ಲಿ ಬೆಂಕಿ ಅಪಘಾತ

ರಮೇಶ ಜಹಗೀರದಾರ್

ದಾವಣಗೆರೆ :  ನಗರದ ಮಾಗಾನಹಳ್ಳಿ ರಸ್ತೆಯ ಗುಜರಿ ಗೋಡೌನ್‌ನಲ್ಲಿ ಸೋಮವಾರ ಬೆಂಕಿ ಅಪಘಾತ ಸಂಭವಿಸಿದೆ.  ಪಕ್ಕದಲ್ಲಿ ಕಸಕ್ಕೆ ಹತ್ತಿದ್ದ ಬೆಂಕಿಯಿಂದ ಕಿಡಿ ಹಾರಿದ್ದರಿಂದ ಗೋಡೌನ್‌ಗೆ ಬೆಂಕಿ ಹತ್ತಿಕೊಂಡಿತು. ಅದರಲ್ಲಿ ಪ್ಲಾೃಸ್ಟಿಕ್ ಮತ್ತು ಲೋಹದ ಗುಜರಿ ವಸ್ತುಗಳಿದ್ದವು. ಯಾರಿಗೂ ತೊಂದರೆಯಾಗಿಲ್ಲ.  ದಾವಣಗೆರೆ ಮತ್ತು ಹರಿಹರದ ಅಗ್ನಿಶಾಮಕ ಠಾಣೆಯ 3 ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಲಾಯಿತು. ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ನಾಗೇಶ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಹಾಲಿಂಗಪ್ಪ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.