ಜಿಲ್ಲೆ

ಡಿಡಿಪಿಐ ಕಚೇರಿಯಲ್ಲಿ ಬೆಂಕಿ

ರಮೇಶ ಜಹಗೀರದಾರ್

ದಾವಣಗೆರೆ : ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಡಿಡಿಪಿಐ ಕಚೇರಿಗೆ ಬುಧವಾರ ರಾತ್ರಿ ಬೆಂಕಿ ಬಿದ್ದಿದ್ದು, ಕಡತ ಹಾಗೂ ಕಂಪ್ಯೂಟರ್‌ಗಳು ಸುಟ್ಟಿವೆ.  ಕಟ್ಟಡದ ಷಟರ್ಸ್‌ನಿಂದ ಹೊರಬರುತ್ತಿದ್ದ ಹೊಗೆಯನ್ನು ಗಮನಿಸಿದ ಸಾರ್ವಜನಿಕರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬಾಗಿಲು ಮುರಿದು ಬೆಂಕಿ ನಂದಿಸಿದರು.  ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾ ಅಧಿಕಾರಿ ಪ್ರೇಮಾನಂದ ಶೇಟ್, ಸಿಬ್ಬಂದಿ ಮಹಾಲಿಂಗ ಪಾಟೀಲ, ನಾಗರಾಜ್ ಟಿ.ಸಿ, ಮುನಿಸ್ವಾಮಿ ನಾಯಕ, ಸತೀಶ್ ಪಾಲ್ಗೊಂಡಿದ್ದರು.