ದಾವಣಗೆರೆ : ಆನ್ ಆ್ಯಂಡ್ ಆಫ್ ಪದ್ಧತಿ ಕೈ ಬಿಟ್ಟು ಭದ್ರಾ ಜಲಾಶಯದಿಂದ ನಿರಂತರ ನೀರು ಹರಿಸುವಂತೆ ಆಗ್ರಹಿಸಿ ಭಾರತೀಯ ರೈತ ಒಕ್ಕೂಟ ಹಾಗೂ ರೈತ ಮುಖಂಡರು ಗುರುವಾರ ಶಿವಮೊಗ್ಗ ಜಿಲ್ಲೆ ಸೊರಬದಲ್ಲಿ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಭದ್ರಾ ಅಚ್ಚುಕಟ್ಟಿನಲ್ಲಿ 62 ಸಾವಿರ ಹೆಕ್ಟೇರ್ ಭತ್ತ ನಾಟಿ ಮಾಡಲಾಗಿದೆ. ನೀರು ಬಂದ್ ಮಾಡಿ ಬಿಡುವುದರಿಂದ ಬೆಳೆಗಳು ಒಣಗುತ್ತವೆ. ಆದ್ದರಿಂದ ನಿರಂತರವಾಗಿ ನೀರು ಹರಿಸುವಂತೆ ರೈತರು ಆಗ್ರಹಿಸಿದರು.
ರೈತ ಮುಖಂಡರಾದ ಶಾಮನೂರು ಲಿಂಗರಾಜ್, ನಾಗೇಶ್ವರ್ ರಾವ್, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಜಿ. ಗಣೇಶಪ್ಪ, ಮಾಜಿ ಮೇಯರ್ ಎಚ್.ಎನ್. ಗುರುನಾಥ್, ಮುಖಂಡರಾದ ಶಿರಮಗೊಂಡನಹಳ್ಳಿ ಮಂಜಣ್ಣ, ಜಮ್ಮಿ ಹನುಮಂತಪ್ಪ, ಕುಂದುವಾಡ ಮಹೇಶಪ್ಪ, ಪುನೀತ್ ಕುಂದುವಾಡ, ದ್ಯಾವಪ್ಪ ರೆಡ್ಡಿ ಇದ್ದರು.