ದಾವಣಗೆರೆ : ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು ಪ್ರಸಕ್ತ ಸನ್ನಿವೇಶದಲ್ಲಿ ಮಕ್ಕಳೇ ಈ ಕಾರ್ಯವನ್ನು ಪ್ರಾರಂಭಿಸಿ ಪಾಲಕರಿಗೆ ಮಾರ್ಗದರ್ಶಿಗಳಾಗಬೇಕಾಗಿದೆ ಎಂದು ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್ ಕಾರ್ಯದರ್ಶಿ ಎಂ.ಬಿ. ಸಂಗಮೇಶಗೌಡರು ಹೇಳಿದರು. ಮಾಗನೂರು ಬಸಪ್ಪ ಶಾಲೆ, ಇಂಟರ‌್ಯಾಕ್ಟ್ ಕ್ಲಬ್ ಹಾಗೂ ರೋಟರಿ ಕ್ಲಬ್ ವಿದ್ಯಾನಗರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಡಿಯ ಸಂಸ್ಥೆಯ ಡಾ. ಜಿ.ಟಿ. ಸುದರ್ಶನ್ ಅವರು ಮಕ್ಕಳಿಗೆ ಪ್ರಾತ್ಯಕ್ಷಿಕೆಗಳ ಸಹಿತ ಪರಿಸರ ಸಂರಕ್ಷಣೆ ಕುರಿತು ಉಪನ್ಯಾಸ ನೀಡಿದರು. ರೋಟರಿ ಕ್ಲಬ್ ವಿದ್ಯಾನಗರ ಅಧ್ಯಕ್ಷ ಎಸ್.ಎನ್. ಮಳವಳ್ಳಿ ಮಾತನಾಡಿದರು. ಇಂಟರ್ ಆಕ್ಟೃ್ ಕ್ಲಬ್ ಅಧ್ಯಕ್ಷೆ ಯುಕ್ತ ಪಾಟೀಲ್ ಹಾಗೂ ಕಾರ್ಯದರ್ಶಿ ಸುಮಾ ಪಾಟೀಲ್ ಭಾಗವಹಿಸಿದ್ದರು. ಪರಿಸರ ಸಂರಕ್ಷಣೆ ಕುರಿತು ಹಲವು ವಿದ್ಯಾರ್ಥಿಗಳು ಮಾತನಾಡಿದರು. ಪರಿಸರ ರಕ್ಷಣೆ ಕುರಿತು ಶಾಲಾ ಮಕ್ಕಳೊಂದಿಗೆ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಹಲವು ರೋಟರಿ ಸದಸ್ಯರು, ಶಾಲಾ ಶಿಕ್ಷಕ ವೃಂದದವರು ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಲಾಯಿತು. ತನು ಸ್ವಾಗತಿಸಿದರು, ಇಂದಿರಾ ವಂದಿಸಿದರು.