ಜಿಲ್ಲೆ

ಪರಿಸರ ಮನುಕುಲದ ಸಂಪತ್ತು

ರಮೇಶ ಜಹಗೀರದಾರ್

ದಾವಣಗೆರೆ : ಹಣ ಹಾಗೂ ಆಸ್ತಿಗಿಂತಲೂ ಉತ್ತಮ ಪರಿಸರ ಮನುಕುಲದ ಸಂಪತ್ತು. ಜೀವಿಸಲು ಬೇಕಾದ ಗಾಳಿ, ನೀರು ಮತ್ತು ಆಹಾರ ಪರಿಸರದ ಕೊಡುಗೆಯಾಗಿದ್ದು, ಅದರ ಸಂರಕ್ಷಣೆ ಎಲ್ಲರ ಹೊಣೆ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.
 ತಾಲೂಕಿನ ಕೊಗ್ಗನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಇತ್ತೀಚೆಗೆ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
 ಗಿಡ, ಮರಗಳು ಇಂಗಾಲದ ಡೈ ಆಕ್ಸೈಡ್ ಹೀರಿಕೊಂಡು ಆಮ್ಲಜನಕ ನೀಡುತ್ತವೆ. ಮರಗಳಲ್ಲಿ ಪರಿಸರ ಸಮತೋಲನಕ್ಕೆ ಸಹಕಾರಿಯಾಗುವ ಸೂಕ್ಷ್ಮಾಣು ಜೀವಿಗಳಿದ್ದು, ಕಾಲಕಾಲಕ್ಕೆ ಮಳೆಯಾಗಲು ಮರಗಳು ಅವಶ್ಯಕ ಎಂದರು.
 ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಮ್ಮ, ಒಬಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಗ್ಗನೂರು ಮಂಜಣ್ಣ, ಕಾಂಗ್ರೆಸ್ ಮುಖಂಡರಾದ ಕುಬೇರಪ್ಪ, ಮರಡಿ ಚಂದ್ರಪ್ಪ, ಕೆಂಚಪ್ಪ, ಪರಸಪ್ಪ, ಮಂಜುನಾಥ್, ಸಿದ್ದೇಶ್, ಹನುಮಂತಣ್ಣ ಇತರರು ಇದ್ದರು.