ದಾವಣಗೆರೆ ಗ್ರಾಮೀಣ ಕುಟುಂಬಗಳು ಮಹಾತ್ಮ ಗಾಂಧಿ ರಾಷ್ಟ್ರೀಸಬಲರಾಗಬೇಕುಯ ಉದ್ಯೋಗ ಖಾತ್ರಿ ಯೋಜನೆಯ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಂಡು ಸಬಲರಾಗಬೇಕು ಎಂದು ಹರಿಹರ ಶಾಸಕ ಬಿ.ಪಿ. ಹರೀಶ್ ಹೇಳಿದರು. ಹರಿಹರ ತಾಲೂಕು ಬೆಳ್ಳೂಡಿ ಗ್ರಾಮದಲ್ಲಿ ಸೋಮವಾರ, ಉದ್ಯೋಗ ಖಾತ್ರಿ ಯೋಜನೆಯ ವೈಯಕ್ತಿಕ ಕಾಮಗಾದಾವಣಗೆರೆ ಗ್ರಾಮೀಣ ಕುಟುಂಬಗಳು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಂಡು ಸಬಲರಾಗಬೇಕು ಎಂದು ಹರಿಹರ ಶಾಸಕ ಬಿ.ಪಿ. ಹರೀಶ್ ಹೇಳಿದರು. ಹರಿಹರ ತಾಲೂಕು ಬೆಳ್ಳೂಡಿ ಗ್ರಾಮದಲ್ಲಿ ಸೋಮವಾರ, ಉದ್ಯೋಗ ಖಾತ್ರಿ ಯೋಜನೆಯ ವೈಯಕ್ತಿಕ ಕಾಮಗಾರಿಯ ಕಾರ್ಯಾದೇಶ ವಿತರಿಸುವ ತಾಲೂಕು ಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನರೇಗಾ ಯೋಜನೆಯಡಿ ನೋಂದಣಿಯಾದ ಪ್ರತಿ ಕುಟುಂಬಕ್ಕೆ ವೈಯಕ್ತಿಕವಾಗಿ ಕಾಮಗಾರಿ ಮಾಡಿಕೊಳ್ಳಲು 5 ಲಕ್ಷ ರೂ. ವರೆಗೆ ಅವಕಾಶವಿದೆ ಎಂದು ತಿಳಿಸಿದರು. ಕಳೆದ ವರ್ಷ ಬರಗಾಲದ ಕಾರಣ ಭದ್ರಾ ಜಲಾಶಯದಲ್ಲಿ ನೀರಿರಲಿಲ್ಲ. ಈ ವರ್ಷ ಡ್ಯಾಮ್ ಭರ್ತಿಯಾಗಿದೆ. ನರೇಗಾ ಯೋಜನೆಯಡಿ ರೈತರ ಹೊಲದ ಕಾಲುವೆಯ ಶೇ. 70ರಷ್ಟು ಹೂಳು ತೆಗೆಯಲಾಗಿದೆ. ಉಳಿದ ಕಾಲುವೆಯ ಹೂಳು ತೆಗೆಯಲು ಕ್ರಮ ಕೈಗೊಳ್ಳುವಂತೆ ಪಿಡಿಒಗಳಿಗೆ ಸೂಚಿಸಿದರು. ಕಾರ್ಯನಿರ್ವಾಹಕ ಅಧಿಕಾರಿ ಎಸ್.ಪಿ. ಸುಮಲತಾ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯು ಜಿಲ್ಲೆಯಲ್ಲಿ 2006 ರಲ್ಲಿ ಜಾರಿಗೆ ಬಂದು 18 ವರ್ಷಗಳಾಗಿವೆ. ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲು ಹೆಚ್ಚಿನ ಅವಕಾಶವಿದೆ. ಎಲ್ಲರೂ ಈ ಯೋಜನೆಯನ್ನು ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ತೋಟಗಾರಿಕೆ ಇಲಾಖೆಯ ಸಹಾಯಕ ಹಿರಿಯ ನಿರ್ದೇಶಕ ಎಂ. ಶಶಿಧರ, ತಮ್ಮ ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಬೆಳ್ಳೂಡಿ ಗ್ರಾ.ಪಂ. ಅಧ್ಯಕ್ಷ ಬಿ. ಉಮೇಶ್, ಉಪಾಧ್ಯಕ್ಷೆ ಡಿ.ವಿ. ನೇತ್ರಮ್ಮ, ಸದಸ್ಯರು, ಎಲ್ಲ ಗ್ರಾ.ಪಂ. ಪಿಡಿಒಗಳು, ನರೇಗಾ ಸಿಬ್ಬಂದಿ ಇದ್ದರು. 356 ಫಲಾನುಭವಿಗಳಿಗೆ ಕಾರ್ಯಾದೇಶ ನೀಡಲಾಯಿತು. ರಿಯ ಕಾರ್ಯಾದೇಶ ವಿತರಿಸುವ ತಾಲೂಕು ಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನರೇಗಾ ಯೋಜನೆಯಡಿ ನೋಂದಣಿಯಾದ ಪ್ರತಿ ಕುಟುಂಬಕ್ಕೆ ವೈಯಕ್ತಿಕವಾಗಿ ಕಾಮಗಾರಿ ಮಾಡಿಕೊಳ್ಳಲು 5 ಲಕ್ಷ ರೂ. ವರೆಗೆ ಅವಕಾಶವಿದೆ ಎಂದು ತಿಳಿಸಿದರು. ಕಳೆದ ವರ್ಷ ಬರಗಾಲದ ಕಾರಣ ಭದ್ರಾ ಜಲಾಶಯದಲ್ಲಿ ನೀರಿರಲಿಲ್ಲ. ಈ ವರ್ಷ ಡ್ಯಾಮ್ ಭರ್ತಿಯಾಗಿದೆ. ನರೇಗಾ ಯೋಜನೆಯಡಿ ರೈತರ ಹೊಲದ ಕಾಲುವೆಯ ಶೇ. 70ರಷ್ಟು ಹೂಳು ತೆಗೆಯಲಾಗಿದೆ. ಉಳಿದ ಕಾಲುವೆಯ ಹೂಳು ತೆಗೆಯಲು ಕ್ರಮ ಕೈಗೊಳ್ಳುವಂತೆ ಪಿಡಿಒಗಳಿಗೆ ಸೂಚಿಸಿದರು. ಕಾರ್ಯನಿರ್ವಾಹಕ ಅಧಿಕಾರಿ ಎಸ್.ಪಿ. ಸುಮಲತಾ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯು ಜಿಲ್ಲೆಯಲ್ಲಿ 2006 ರಲ್ಲಿ ಜಾರಿಗೆ ಬಂದು 18 ವರ್ಷಗಳಾಗಿವೆ. ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲು ಹೆಚ್ಚಿನ ಅವಕಾಶವಿದೆ. ಎಲ್ಲರೂ ಈ ಯೋಜನೆಯನ್ನು ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ತೋಟಗಾರಿಕೆ ಇಲಾಖೆಯ ಸಹಾಯಕ ಹಿರಿಯ ನಿರ್ದೇಶಕ ಎಂ. ಶಶಿಧರ, ತಮ್ಮ ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಬೆಳ್ಳೂಡಿ ಗ್ರಾ.ಪಂ. ಅಧ್ಯಕ್ಷ ಬಿ. ಉಮೇಶ್, ಉಪಾಧ್ಯಕ್ಷೆ ಡಿ.ವಿ. ನೇತ್ರಮ್ಮ, ಸದಸ್ಯರು, ಎಲ್ಲ ಗ್ರಾ.ಪಂ. ಪಿಡಿಒಗಳು, ನರೇಗಾ ಸಿಬ್ಬಂದಿ ಇದ್ದರು. 356 ಫಲಾನುಭವಿಗಳಿಗೆ ಕಾರ್ಯಾದೇಶ ನೀಡಲಾಯಿತು.