ಜಿಲ್ಲೆ

ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ

Davanagere

ದಾವಣಗೆರೆ: ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ವೇಳೆ ದಾವಣಗೆರೆ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಬುಧವಾರ ಮಾತಿನ ಚಕಮಕಿ ನಡೆಯಿತು.

ಮತದಾನ ಕೇಂದ್ರದ ಹೊರಗೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಒಳಗೆ ಹೋಗುತ್ತಿದ್ದ ಮತದಾರರಿಗೆ ಉಭಯ ಪಕ್ಷಗಳ ಕಾರ್ಯಕರ್ತರು ಮನವಿ ಮಾಡುತ್ತಿದ್ದ ಸಂದರ್ಭದಲ್ಲಿ ವಾಗ್ವಾದ ನಡೆಯಿತು. ನಂತರ ಪೊಲೀಸರು ಮಧ್ಯ ಪ್ರವೇಶಿಸಿ ದೂರದಲ್ಲಿ ನಿಲ್ಲುವಂತೆ ವ್ಯವಸ್ಥೆ ಮಾಡಿದರು.

ಜಿಲ್ಲೆಯ 32 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ಬೆಳಗ್ಗೆ 10 ಗಂಟೆಗೆ ಶೇ. 5 ರಷ್ಟು ಮತದಾನವಾಗಿತ್ತು. ದಾವಣಗೆರೆ, ಜಗಳೂರು, ಹರಿಹರ ತಾಲೂಕು ಒಳಗೊಂಡಂತೆ ಜಿಲ್ಲೆಯಲ್ಲಿ ಒಟ್ಟು 20,962 ಮತದಾರರಿದ್ದಾರೆ.

ದಾವಣಗೆರೆ ನಗರ 18, ಮಾಯಕೊಂಡ 4, ಹರಿಹರ 6 ಜಗಳೂರು 4 ಮತಗಟ್ಟೆಗಳಿವೆ.

ಹರಿಹರ 4,074, ಜಗಳೂರು 1,944 ಮತದಾರರಿದ್ದಾರೆ.

ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 12,868, ದಾವಣಗೆರೆ ಗ್ರಾಮಾಂತರ (ಮಾಯಕೊಂಡ) 2,076,