ದಾವಣಗೆರೆ : ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದಿಂದ ಎಐಯುಟಿಯುಸಿ ಮುಖಂಡ ಅಣಬೇರು ತಿಪ್ಪೇಸ್ವಾಮಿ ಅವರನ್ನು ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲಾಗುವುದು ಎಂದು ಪಕ್ಷದ ರಾಜ್ಯ ಸಮಿತಿ ಸದಸ್ಯೆ ಬಿ.ಆರ್. ಅಪರ್ಣಾ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ಸೇರಿ 19 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 151 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಚುನಾವಣಾ ಸಂದರ್ಭಗಳಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಸುಳ್ಳು ಆಶ್ವಾಸನೆ ನೀಡಿ, ಜನರನ್ನು ದಿಕ್ಕು ತಪ್ಪಿಸುತ್ತಿವೆ. ಈ ಪಕ್ಷಗಳ ಕಾರ್ಪೊರೇಟ್ ಪರವಾದ ನೀತಿಗಳಿಂದಾಗಿ ದೇಶದ ಅಭಿವೃದ್ಧಿ ಅಧೋಗತಿಗೆ ಇಳಿದಿದೆ. ದಿನಕ್ಕೊಂದು ಹಗರಣ ಹೊರ ಬರುತ್ತಿವೆ. ಶೇ. 1ರಷ್ಟು ಜನರ ಕೈಯಲ್ಲಿ ದೇಶದ ಶೇ. 70 ರಷ್ಟು ಆಸ್ತಿ ಶೇಖರಣೆಯಾಗಿದೆ. ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ ಎಂದು ಆರೋಪಿಸಿದರು.
ಪಕ್ಷದ ಅಭ್ಯರ್ಥಿ ಅಣಬೇರು ತಿಪ್ಪೇಸ್ವಾಮಿ, ಮುಖಂಡರಾದ ಟಿವಿಎಸ್ ರಾಜು, ಮಂಜುನಾಥ ಕೈದಾಳೆ, ಭಾರತಿ, ಮಂಜುನಾಥ ಕುಕ್ಕುವಾಡ, ಶಿವಾಜಿರಾವ್, ಮಹಾಂತೇಶ್, ಕವಿತಾ ಇದ್ದರು.
...