ರಮೇಶ ಜಹಗೀರದಾರ್ ದಾವಣಗೆರೆ
ಮಳೆಗಾಲಕ್ಕೆ ಮುನ್ನವೇ ರಾಜ್ಯದಲ್ಲಿ ಡೆಂಘೆ ಡಾನ್ಸ್ ಶುರುವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಸಮುದಾಯದ ಸಹಕಾರದೊಂದಿಗೆ ಈ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಆರೋಗ್ಯ ಇಲಾಖೆ ಹೆಜ್ಜೆ ಇಟ್ಟಿದೆ.
ಮೇ 13 ರ ವರೆಗೆ ರಾಜ್ಯದಲ್ಲಿ 2877 ಡೆಂೆ ಪ್ರಕರಣಗಳು ದೃಢಪಟ್ಟಿವೆ. ಕಳೆದ ವರ್ಷ ಈ ಅವಧಿಗೆ 1725 ಪಾಸಿಟಿವ್ ಕೇಸ್ಗಳಿದ್ದವು. ಕೆಲವು ಜಿಲ್ಲೆಗಳಲ್ಲಿ ಈ ಬಾರಿ ಎರಡು ಪಟ್ಟು ಹೆಚ್ಚಳವಾಗಿರುವುದು ಆತಂಕ ಮೂಡಿಸಿದೆ.
‘ಈಡಿಸ್ ಈಜಿಪ್ಟೈ’ ಸೊಳ್ಳೆಯ ಕಚ್ಚುವಿಕೆಯಿಂದ ಡೆಂೆ ಜ್ವರ ಕಾಣಿಸಿಕೊಳ್ಳುತ್ತದೆ. ಈ ಸೊಳ್ಳೆಗಳು ಶುದ್ಧ ನೀರಿನಲ್ಲಿ ಸಂತಾನಾಭಿವೃದ್ಧಿ ಮಾಡುತ್ತವೆ. ಅವು ಹಗಲು ಹೊತ್ತಿನಲ್ಲೆ ಮನುಷ್ಯರನ್ನು ಕಚ್ಚುತ್ತವೆ.
ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗ, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು ಈ ರೋಗದ ಪ್ರಮುಖ ಲಕ್ಷಣಗಳು.
ಪ್ರತಿ ವರ್ಷ ಮೇ 16 ರಂದು ರಾಷ್ಟ್ರೀಯ ಡೆಂೆ ದಿನವನ್ನು ಆಚರಿಸಲಾಗುತ್ತದೆ. ‘ಸಮುದಾಯದೊಂದಿಗೆ ಸೇರಿ ಡೆಂೆ ಜ್ವರವನ್ನು ನಿಯಂತ್ರಿಸೋಣ’ ಎಂಬುದು ಈ ವರ್ಷದ ಧ್ಯೇಯ ವಾಕ್ಯ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಗಳು ನಡೆಯುತ್ತಿವೆ.
ಆರೋಗ್ಯ ಇಲಾಖೆಯ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಲಾರ್ವಾ ಸಮೀಕ್ಷೆ ನಡೆಸುತ್ತಿದ್ದಾರೆ. ಅಭಾವ ಇರುವುದರಿಂದ ಸಾರ್ವಜನಿಕರು ನೀರನ್ನು ತೊಟ್ಟಿಗಳಲ್ಲಿ ಸಂಗ್ರಹಿಸಿ ಇಡುತ್ತಾರೆ. ಅವುಗಳನ್ನು ಸರಿಯಾಗಿ ಮುಚ್ಚದಿದ್ದರೆ ಲಾರ್ವಾಗಳ ಉತ್ಪತ್ತಿಗೆ ಕಾರಣವಾಗುತ್ತದೆ. ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.
...
ನಿಯಂತ್ರಣ ಕ್ರಮಗಳು
* ಮನೆಯಲ್ಲಿ ತೊಟ್ಟಿ, ಬ್ಯಾರೆಲ್, ಡ್ರಮ್ಗಳಲ್ಲಿನ ನೀರನ್ನು ವಾರಕ್ಕೊಮ್ಮೆ ಖಾಲಿ ಮಾಡಿ, ಉಜ್ಜಿ ತೊಳೆದು ಮತ್ತೆ ನೀರು ತುಂಬಿಸಿ ಮುಚ್ಚಿಡುವುದು
* ಮನೆಯ ಸುತ್ತಮುತ್ತ ಬಿಸಾಡಿರುವ ವಸ್ತುಗಳಲ್ಲಿ ಮಳೆ ನೀರು ಶೇಖರಣೆಯಾಗದಂತೆ ಎಚ್ಚರಿಕೆ ವಹಿಸುವುದು
* ಎಲ್ಲ ಸರ್ಕಾರಿ, ಖಾಸಗಿ ಕಚೇರಿ ಹಾಗೂ ಸಂಸ್ಥೆಗಳ ಒಳಾಂಗಣ, ಹೊರಾಂಗಣಗಳಲ್ಲಿ ಈಡಿಸ್ ಸೊಳ್ಳೆಯ ಉತ್ಪತ್ತಿ ನಿಯಂತ್ರಣಕ್ಕೆ ಕ್ರಮ
* ಸೊಳ್ಳೆ ಪರದೆಗಳನ್ನು ಬಳಸುವುದು
* ಆರೋಗ್ಯ ಕಾರ್ಯಕರ್ತರು ಮನೆ ಭೇಟಿ ಸಂದರ್ಭದಲ್ಲಿ ನೀಡುವ ಸಲಹೆಗಳನ್ನು ಪಾಲಿಸುವುದು
...
(ಬಾಕ್ಸ್)
ಜಿಲ್ಲೆ 2023 ಮೇ 13ರ ವರೆಗೆ 2024
ಬೆಂಗಳೂರು(ನಗರ) 10, 10
ಬೆಂಗಳೂರು(ಗ್ರಾ) 20, 8
ರಾಮನಗರ 16, 34
ಕೋಲಾರ 23, 28
ಚಿಕ್ಕಬಳ್ಳಾಪುರ 12, 50
ತುಮಕೂರು 32, 120
ಚಿತ್ರದುರ್ಗ 77, 187
ದಾವಣಗೆರೆ 31, 92
ಶಿವಮೊಗ್ಗ 36, 180
ಬೆಳಗಾವಿ 52, 76
ವಿಜಯಪುರ 85, 120
ಬಾಗಲಕೋಟೆ 40, 34
ಧಾರವಾಡ 49, 79
ಗದಗ 28, 30
ಹಾವೇರಿ 21, 73
ಉತ್ತರ ಕನ್ನಡ 3, 40
ಕಲಬುರಗಿ 7, 129
ಯಾದಗಿರಿ 28, 1
ಬೀದರ್ 2, 23
ಬಳ್ಳಾರಿ 64, 42
ವಿಜಯನಗರ 21, 13
ರಾಯಚೂರು 9, 22
ಕೊಪ್ಪಳ 27, 78
ಮೈಸೂರು 137, 252
ಚಾಮರಾಜನಗರ 26, 40
ಮಂಡ್ಯ 22, 125
ಹಾಸನ 36, 121
ದಕ್ಷಿಣ ಕನ್ನಡ 44, 140
ಉಡುಪಿ 14, 73
ಚಿಕ್ಕಮಗಳೂರು 6, 80
ಕೊಡಗು 15, 42
ಬಿಬಿಎಂಪಿ 732, 535
...