ಜಿಲ್ಲೆ

ನಾಡಹಬ್ಬ ಅದ್ದೂರಿ ಆಚರಣೆಗೆ ಸಚಿವರ ಸೂಚನೆ

ರಮೇಶ ಜಹಗೀರದಾರ್

ದಾವಣಗೆರೆ  : ನಾಡ ಹಬ್ಬವಾದ ದಸರಾವನ್ನು ಸಂಭ್ರಮ ಮತ್ತು ವಿಜೃಂಭಣೆಯಿಂದ ಆಚರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸೂಚನೆ ನೀಡಿದರು.  ನಗರ ದೇವತೆ ದುರ್ಗಾಂಬಿಕಾ ದೇವಿ ದೇವಸ್ಥಾನ ಟ್ರಸ್ಟ್ ವತಿಯಿಂದ 2025ನೇ ಸಾಲಿನ ದಸರಾ ಮಹೋತ್ಸವ ಆಚರಣೆ ಅಂಗವಾಗಿ ಶ್ರೀ ದುರ್ಗಾಂಬಿಕಾ ದೇವಿ ಪ್ರಸಾದ ನಿಲಯದಲ್ಲಿ ಶನಿವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.  ದಸರಾ ಹಬ್ಬವೆಂದರೆ ನಮ್ಮ ನಾಡ ಸಂಸ್ಕೃತಿ ಹಾಗೂ ಹೆಮ್ಮೆಯ ಗರಿ, ಐತಿಹಾಸಿಕ ಪರಂಪರೆಯನ್ನು ಹೊಂದಿದೆ. ನಗರ ದೇವತೆಯ ಆಶೀರ್ವಾದದಿಂದ ಅಚ್ಚುಕಟ್ಟಾಗಿ ನೆರವೇರಿಸೋಣ ಎಂದು ತಿಳಿಸಿದರು.  ಉದ್ಯಮಿ ಅಥಣಿ ವೀರಣ್ಣ, ಎಚ್.ಬಿ. ಗೋಣೆಪ್ಪ, ಬಿ.ಎಚ್. ವೀರಭದ್ರಪ್ಪ, ಟ್ರಸ್ಟ್‌ನ ಧರ್ಮದರ್ಶಿಗಳು, ಗೌಡರು, ಶಾನುಭೋಗರು, ರೈತರು, ಬಾರೀಕರು, ಬಣಕಾರರು, ಕುಂಬಾರರು, ತಳವಾರರು, ಬಾಬುದಾರರು, ಕಾರ್ಯಕರ್ತರು ಇದ್ದರು.