ಜಿಲ್ಲೆ

ಸೈಬರ್ ಭದ್ರತೆ ಕುರಿತು ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ

ದಾವಣಗೆರೆ : ನಗರದ ಜೈನ್ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದಿಂದ ಎಐಸಿಟಿಇ ತರಬೇತಿ ಮತ್ತು ಕಲಿಕೆಯಿಂದ ಪ್ರಾಯೋಜಿಸಲ್ಪಟ್ಟ ನೆಕ್ಸ್ಟ್-ಜೆನ್ ಸೈಬರ್ ಭದ್ರತೆ, ರೆಸಿಲಿಯೆಂಟ್ ಡಿಜಿಟಲ್ ಭವಿಷ್ಯದ ಕಾರ್ಯ ತಂತ್ರಗಳ ಕುರಿತು 6 ದಿನಗಳ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ ಸೋಮವಾರ ಉದ್ಘಾಟನೆಯಾಯಿತು.  ಅಟಲ್ ಯೋಜನೆಯ ಪ್ರಾಯೋಜಕತ್ವದ ಈ ಕಾರ್ಯಕ್ರಮವು ಸೈಬರ್ ಭದ್ರತೆಯ ಕ್ಷೇತ್ರದಲ್ಲಿ ಅಧ್ಯಾಪಕರ ಜ್ಞಾನ ಮತ್ತು ಕೌಶಲಗಳನ್ನು ಹೆಚ್ಚಿಸುವ ಗುರಿ ಹೊಂದಿದೆ.  ಅಮೆರಿಕ ಮೂಲದ ಬಹುರಾಷ್ಟ್ರೀಯ ಕಂಪನಿಯ ನಿರ್ದೇಶಕ ಡಾ. ಉದಯಶಂಕರ್ ಪುರಾಣಿಕ್, ಸೈಬರ್ ಅಪರಾಧ, ತನಿಖೆ, ಸೈಬರ್ ಭದ್ರತೆಯಲ್ಲಿನ ಇತ್ತೀಚಿನ ಪ್ರವೃತ್ತಿಗಳು ಮತ್ತು ತಂತ್ರಜ್ಞಾನಗಳ ಕುರಿತು ಒಳನೋಟ ಬೀರಿದರು.  ಜೈನ್ ಕಾಲೇಜಿನ ಸಲಹೆಗಾರ ಡಾ. ಮಂಜಪ್ಪ ಸಾರಥಿ, ಸೈಬರ್ ಅಪರಾಧಗಳಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ತಿಳಿಸಿದರು. ಪ್ರಾಚಾರ್ಯ ಡಾ.ಡಿ.ಬಿ. ಗಣೇಶ್ ಮಾತನಾಡಿದರು.  ಈ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ 60 ಅಧ್ಯಾಪಕರು ಪಾಲ್ಗೊಂಡಿದ್ದಾರೆ. ಡಾ. ಎಸ್. ಮೌನೇಶಾಚಾರಿ, ಡಾ.ಸಿ. ನಿರಂಜನ ಮೂರ್ತಿ, ಡಾ. ಮುಸ್ತಫಾ ಬಸ್ತಿಕೋಡಿ, ಡಾ. ಅನಂತ್ ಪ್ರಭು ಗುರ್ಪುರ್, ಡಾ.ಎ.ಆರ್. ಅಶೋಕ್ ಕುಮಾರ್, ಡಾ. ಮೋಹಿತ್ ಪಿ. ತಹಿಲಿಯಾನಿ ಇದ್ದರು.