ಜಿಲ್ಲೆ

ಗಾಂಜಾ ಮಾರಾಟ, ಬೀಡಾ ಅಂಗಡಿ ವ್ಯಾಪಾರಿಯ ಬಂಧನ

ರಮೇಶ ಜಹಗೀರದಾರ್

ದಾವಣಗೆರೆ  : ಗಾಂಜಾ ಮಾರಾಟ ಆರೋಪದ ಮೇಲೆ ಬೀಡಾ ಅಂಗಡಿ ವ್ಯಾಪಾರಿಯೊಬ್ಬನನ್ನು ಬಡಾವಣೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.  ನಗರದ ರಾಂ ಆ್ಯಂಡ್ ಕೋ ವೃತ್ತದಲ್ಲಿ ಬೀಡಾ ಅಂಗಡಿ ಇಟ್ಟುಕೊಂಡಿದ್ದ ರಾಜು ಅಲಿಯಾಸ್ ಪ್ಯಾರಿಲಾಲ್ ಬಂಧಿತ ಆರೋಪಿ. ಉತ್ತರ ಭಾರತದ ರಾಜು ಹಲವು ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದ. ಚಾಕಲೇಟ್ ಹಾಗೂ ಇತರ ವಸ್ತುಗಳ ಜತೆಗೆ ಗಾಂಜಾ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಸೋಮವಾರ ಸಂಜೆ ಅಂಗಡಿಯ ಮೇಲೆ ದಾಳಿ ನಡೆಸಿದರು.