ಜಿಲ್ಲೆ

ಸಂಪುಟದಿಂದ ಅಮಿತ್ ಷಾ ವಜಾಗೊಳಿಸಲು ಆಗ್ರಹ

ರಮೇಶ ಜಹಗೀರದಾರ್

ದಾವಣಗೆರೆ  : ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಅಂಬೇಡ್ಕರ್ ಅವರ ಕುರಿತು ಸಂಸತ್‌ನಲ್ಲಿ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಸಚಿವ ಸಂಪುಟದಿಂದ ವಜಾ ಗೊಳಿಸುವಂತೆ ಆಗ್ರಹಿಸಿ ಸಿಪಿಐ ಜಿಲ್ಲಾ ಮಂಡಳಿಯಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.  ಅಶೋಕ ರಸ್ತೆಯ ಪಂಪಾಪತಿ ಭವನದಿಂದ ಹೊರಟ ಪ್ರತಿಭಟನಾಕಾರರು ಗಾಂಧಿ ಸರ್ಕಲ್ಗೆ ತೆರಳಿ ಬಹಿರಂಗ ಸಭೆ ನಡೆಸಿದರು. ನಂತರ ಎಸಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.  ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಮಾತನಾಡಿ, ದೇಶದ ಇತಿಹಾಸ ತಿಳಿಯದ, ಸಂಸ್ಕೃತಿ ಮತ್ತು ಸಹಬಾಳ್ವೆ ಪರಿಚಯ ಇಲ್ಲದ ಹಾಗೂ ವ್ಯಾಪಾರಿ ಮನೋಭಾವ ಹೊಂದಿರುವ ಇಂತಹ ಗೃಹ ಮಂತ್ರಿಯನ್ನು ಕೂಡಲೇ ಕೇಂದ್ರ ಸಚಿವ ಸಂಪುಟದಿಂದ ವಜಾ ಗೊಳಿಸಬೇಕೆಂದು ರಾಷ್ಟ್ರಪತಿ ಅವರಿಗೆ ಆಗ್ರಹಿಸಿದರು.  ಪಕ್ಷದ ಜಿಲ್ಲಾ ಸಹ ಕಾರ್ಯದರ್ಶಿ ಎಚ್.ಜಿ. ಉಮೇಶ್, ಜಿಲ್ಲಾ ಮಂಡಳಿ ಸದಸ್ಯ ಜಯಣ್ಣ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.  ಸಿಪಿಐ ಜಿಲ್ಲಾ ಖಜಾಂಚಿ ಮಹಮ್ಮದ್ ರಫೀಕ್, ಮುಖಂಡರಾದ ಮಹಮ್ಮದ್ ಬಾಷಾ ಜಗಳೂರು, ಸಿ. ರಮೇಶ್, ಶೇಖರ ನಾಯಕ, ಸುರೇಶ್, ತಿಪ್ಪೇಶ್, ಜೀವನ್, ದೇವೇಂದ್ರಪ್ಪ, ಸರೋಜಾ, ನಿಟುವಳ್ಳಿ ಬಸವರಾಜ, ಕೆ.ಜಿ. ಶಿವಮೂರ್ತಿ, ತಿಮ್ಮಣ್ಣ, ಎಚ್.ಎಸ್. ಚಂದ್ರು, ಮರಿಯಪ್ಪ ರಂಗನಾಥ್ ಇತರರು ಭಾಗವಹಿಸಿದ್ದರು.