ದಾವಣಗೆರೆ : ಸಹಕಾರ ಭಾರತಿ -ದಾವಣಗೆರೆ ಜಿಲ್ಲೆಯ ಅಭ್ಯಾಸ ವರ್ಗವು ನಗರದ ಕುವೆಂಪು ಕನ್ನಡ ಭವನದಲ್ಲಿ ಮಂಗಳವಾರ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಎಚ್. ಇಂದ್ರಪ್ಪ ವಹಿಸಿದರು. ರಾಜ್ಯಾಧ್ಯಕ್ಷ ಪ್ರಭುದೇವ್ ಮಾಗನೂರ್ ಉದ್ಘಾಟಿಸಿದರು. ಸಹಕಾರ ಭಾರತಿ ಪರಿಚಯವನ್ನು ನರಸಿಂಹ ಕಾಮತ್ ನಡೆಸಿಕೊಟ್ಟರು. ಆಡಳಿತ ಮಂಡಳಿ ನಿರ್ದೇಶಕರ ಜವಾಬ್ದಾರಿ ಮತ್ತು ಕರ್ತವ್ಯದ ಕುರಿತು ಮಾಜಿ ರಾಜ್ಯಾಧ್ಯಕ್ಷ ಸತೀಶ್ ಚಂದ್ರ ಉಪನ್ಯಾಸ ನೀಡಿದರು. ಅಂತಾರಾಷ್ಟ್ರೀಯ ಸಹಕಾರಿ ವರ್ಷದ ಬಗ್ಗೆ ಡಾ.ಎಚ್.ಎಸ್. ಮಂಜುನಾಥ್ ಕುರ್ಕಿ ತಿಳಿಸಿಕೊಟ್ಟರು. ಈ ಅಭ್ಯಾಸ ವರ್ಗದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಆರ್. ಮಂಜುನಾಥ್, ವಿಭಾಗ ಪ್ರಮುಖ ಮಾಲತೇಶ್, ಅಧ್ಯಕ್ಷ ಸಿರಿಗೆರೆ ರಾಜಣ್ಣ, ದಾವಣಗೆರೆ ಹರಿಹರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಎನ್.ಎ. ಮುರುಗೇಶ್, ಚನ್ನಗಿರಿ ತುಮ್‌ಕೋಸ್ ಅಧ್ಯಕ್ಷ ಎಚ್.ಎಸ್. ಶಿವಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್, ಜಿಲ್ಲಾ ಮಹಿಳಾ ಪ್ರಮುಖ ಪುಷ್ಪಾ ವಾಲಿ ಇದ್ದರು. ರಾಜಶೇಖರ್ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಪಿ. ರವಿ ನಿರೂಪಿಸಿದರು. 250 ಕ್ಕೂ ಹೆಚ್ಚಿನ ಸಹಕಾರಿ ಸಂಸ್ಥೆಯ ನಿರ್ದೇಶಕರು ಪಾಲ್ಗೊಂಡಿದ್ದರು.