ಜಿಲ್ಲೆ

ದಿನವಿಡೀ ಬಿಟ್ಟು ಬಿಡದೇ ಸುರಿದ ವರುಣ

ದಾವಣಗೆರೆ: ಮಳೆರಾಯನ ಪ್ರವೇಶದಿಂದಾಗಿ ಮಂಗಳವಾರ ಇಡೀ ದಿನ ನಗರ, ಮಲೆನಾಡಿನಂತಾಗಿತ್ತು. ಬೆಳಗಿನಿಂದಲೂ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ನಂತರ ಶುರುವಾದ ಗಾಳಿ ಸಹಿತ ಜಿಟಿಜಿಟಿ ಮಳೆ ರಾತ್ರಿಯವರೆಗೂ ಮುಂದುವರಿದಿತ್ತು.

ರಸ್ತೆಗಳು, ತಗ್ಗು ಪ್ರದೇಶಗಳಲ್ಲಿ ನೀರು ಹರಿಯಿತು. ರೈಲ್ವೆ ಕೆಳ ಸೇತುವೆಗಳು ಜಲಾವೃತವಾಗಿದ್ದು ಪಾದಚಾರಿಗಳು ಓಡಾಡಲು ಕಸರತ್ತು ನಡೆದಿದರು. ವಾಹನ ಸವಾರರು ಛತ್ರಿ, ರೇನ್‌ಕೋಟ್, ಟವೆಲ್ ಹೊದ್ದು ಸಾಗಿದರು.

ಹರಿಹರ, ಹರಪನಹಳ್ಳಿ ತಾಲೂಕಿನಲ್ಲೂ ಉತ್ತಮ ಮಳೆಯಾಗಿದೆ. ಯಾವುದೇ ಹಾನಿ ವರದಿಯಾಗಿಲ್ಲ. ಮಳೆ ಹೆಚ್ಚಿದ್ದರಿಂದ ಭದ್ರಾ ಜಲಾಶಯದಲ್ಲಿ ಒಳ ಹರಿವು ಹೆಚ್ಚುವ ಸಾಧ್ಯತೆ ಇದ್ದು ಅಚ್ಚುಕಟ್ಟಿನ ರೈತರಲ್ಲೂ ಮಂದಹಾಸ ಮೂಡಿಸಿದೆ.