ಜಿಲ್ಲೆ

ಆ. 1ರಂದು ‘ಕೊತ್ತಲವಾಡಿ’ ಚಲನಚಿತ್ರ ಬಿಡುಗಡೆ

ರಮೇಶ ಜಹಗೀರದಾರ್

ದಾವಣಗೆರೆ  : ‘ಕೊತ್ತಲವಾಡಿ’ ಕನ್ನಡ ಚಲನಚಿತ್ರ ಆ. 1ರಂದು ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕಿ ಪುಷ್ಪಾ ಅರುಣ ಕುಮಾರ್ ಹೇಳಿದರು.  ಚಿತ್ರ ತಂಡದೊಂದಿಗೆ ನಗರದ ‘ಬಿಎಸ್‌ಸಿ ಎಕ್ಸ್‌ಕ್ಲೂಸಿವ್’ ಶೋರೂಮ್‌ಗೆ ಶನಿವಾರ ಭೇಟಿ ನೀಡಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.  ಸಿನಿಮಾ ಹಳ್ಳಿಯೊಂದರ ಕತೆಯಾಗಿದ್ದು ಎಲ್ಲರಿಗೂ ಇಷ್ಟವಾಗಲಿದೆ ಎಂಬ ವಿಶ್ವಾಸವಿದೆ. ಚಿತ್ರದಲ್ಲಿ 5 ಹಾಡುಗಳಿವೆ. 150 ಚಿತ್ರ ಮಂದಿರಗಳಲ್ಲಿ ಬಿಡುಗಡೆ ಮಾಡಲಾಗುವುದು. ಪ್ರೇಕ್ಷಕರು ಚಿತ್ರ ಮಂದಿರಕ್ಕೆ ಹೋಗಿ ಸಿನಿಮಾ ನೋಡಬೇಕು ಎಂದು ಮನವಿ ಮಾಡಿದರು.  ಚಿತ್ರದ ನಾಯಕ ನಟ ಪೃಥ್ವಿ ಅಂಬರ್ ಮಾತನಾಡಿ, ಚಾಮರಾಜ ನಗರದ ಹಳ್ಳಿಯೊಂದರಲ್ಲಿ ನಡೆಯುವ ವಿದ್ಯಮಾನಗಳ ಸುತ್ತ ಚಿತ್ರದ ಕತೆಯನ್ನು ಹೆಣೆಯಲಾಗಿದೆ. ನಿಸ್ವಾರ್ಥ ಭಾವದ ಹಳ್ಳಿ ಹುಡುಗನ ಪಾತ್ರದಲ್ಲಿ ನಾನು ಅಭಿನಯಿಸುತ್ತಿದ್ದೇನೆ. ತಲಕಾಡು, ರಾಮನಗರ ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ತಿಳಿಸಿದರು.  ಇದುವರೆಗೆ ನಾನು ವಿವಿಧ ಭಾಷೆಯ 10 ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಇದುವರೆಗೆ ನಾನು ನಟಿಸಿದ ಸಿನಿಮಾಗಳ ಪೈಕಿ ‘ಕೊತ್ತಲವಾಡಿ’ ಹೆಚ್ಚು ಬಜೆಟ್‌ನ ಚಿತ್ರವಾಗಿದೆ ಎಂದರು.  ಚಿತ್ರದ ನಾಯಕಿ ಕಾವ್ಯಾ ಮಾತನಾಡಿ, ‘ಕೆಂಡಸಂಪಿಗೆ’ ಸೇರಿ ಕಿರುತೆರೆಯ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದೇನೆ. ನನಗೆ ಇದು ಮೊದಲ ಸಿನಿಮಾ ಅವಕಾಶವಾಗಿದೆ. ಎಲ್ಲರೂ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದು ಕೋರಿದರು.  ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್ ಸಂಸ್ಥೆಯ ಸಿಬ್ಬಂದಿ ವೀರಣ್ಣ, ಸೆಲ್ವಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.  ...    (ಕೋಟ್)  ‘ಕೊತ್ತಲವಾಡಿ’ ಚಿತ್ರ ತಂಡವು ನಮ್ಮ ಶೋರೂಮ್‌ಗೆ ಆಗಮಿಸಿರುವುದರಿಂದ ಸಂತೋಷವಾಗಿದೆ. ಶ್ರಾವಣ ಸಂಭ್ರಮದ ಡಬಲ್ ಡಿಸ್ಕೌಂಟ್‌ನ್ನು ಗ್ರಾಹಕರಿಗೆ ನೀಡುತ್ತಿರುವ ಹೊತ್ತಿನಲ್ಲಿ ಈ ತಂಡ ಬಂದಿರುವುದು ಡಬಲ್ ಖುಷಿ ತಂದಿದೆ.   ಬಿ.ಎಸ್. ಮೃನಾಲ್, ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್ ಮಾಲೀಕ  ...