ದಾವಣಗೆರೆ : ಜಿಲ್ಲಾದ್ಯಂತ ಸೋಮವಾರ ಮುಸ್ಲಿಮರು ರಂಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಹಬ್ಬದ ಅಂಗವಾಗಿ ನಗರದ ಹಳೇ ಪಿಬಿ ರಸ್ತೆಯ ಈದ್ಗಾ, ರಜಾ-ವುಲ್-ಮುಸ್ತಫಾ ನಗರದ ಹೊಸ ಈದ್ಗಾ ಮತ್ತು ಎಸ್‌ಒಜಿ ಕಾಲನಿಯ ಈದ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಅಲ್ಲದೇ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಹಬ್ಬದಲ್ಲಿ ಭಾಗಿಯಾದವರು ಶುಭಾಶಯ ವಿನಿಮಯ ಮಾಡಿಕೊಂಡರು. ಬಡವರಿಗೆ, ಅಶಕ್ತರಿಗೆ ದಾನ ಮಾಡಲಾಯಿತು. ಮಕ್ಕಳು ಹೊಸ ಬಟ್ಟೆ ಧರಿಸಿದ್ದರು.