ಜಿಲ್ಲೆ

ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

ರಮೇಶ ಜಹಗೀರದಾರ್

ದಾವಣಗೆರೆ: ನರೇಂದ್ರ ಮೋದಿಯವರು ಸತತ ಮೂರನೇ ಬಾರಿ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಎನ್‌ಡಿಎ ಮೈತ್ರಿಕೂಟ ದೇಶದ ಆಡಳಿತ ಚುಕ್ಕಾಣಿ ಹಿಡಿದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿ ಭಾನುವಾರ ಸಂಭ್ರಮಾಚರಣೆ ನಡೆಸಿದರು.
 ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಿಂದ ಬಿಜೆಪಿ ಬಾವುಟ ಮತ್ತು ಮೋದಿಯವರ ಭಾವಚಿತ್ರ  ಹಿಡಿದು ಜಯಘೋಷ ಕೂಗುತ್ತ ಹೊರಟ ಕಾರ್ಯಕರ್ತರು ಜಯದೇವ ವೃತ್ತದಲ್ಲಿ ಪಟಾಕಿ ಸಿಡಿಸಿ ಹಾಗೂ ಸಿಹಿ ವಿತರಿಸುವ ಮೂಲಕ ಸಂಭ್ರಮಿಸಿದರು.
 ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್ ಮಾತನಾಡಿ, ಮೋದಿಯವರು ಸತತ 3ನೇ ಬಾರಿ ಪ್ರಧಾನಿಯಾಗಿರುವುದು ಅತೀವ ಸಂತಸ ತಂದಿದೆ. ರಾಷ್ಟ್ರವನ್ನು ಆರ್ಥಿಕವಾಗಿ 5ನೇ ಸ್ಥಾನಕ್ಕೆ ಕೊಂಡೊಯ್ಯುವ ಮೂಲಕ ವಿಕಾಸದ ಹಾದಿ ತೋರಿಸಿದ ಮಹಾನ್ ಪುರುಷ ಮೋದಿ ಎಂದು ಬಣ್ಣಿಸಿದರು.
 ಜಿಲ್ಲಾ ಬಿಜೆಪಿ ವಕ್ತಾರ ಬಿ.ಎಂ.ಸತೀಶ್ ಕೊಳೇನಹಳ್ಳಿ, ಪಿ.ಸಿ. ಶ್ರೀನಿವಾಸ್, ಪಿ.ಎಸ್. ಬಸವರಾಜ್, ಶಂಕರಗೌಡ ಬಿರಾದಾರ್, ಕಡ್ಲೇಬಾಳ್ ಬಸವರಾಜ್, ಅಣಬೇರು ಶಿವಪ್ರಕಾಶ್, ಕೊಟ್ರೇಶ್‌ಗೌಡ, ನಿಂಗರಾಜ್ ಹಾವನೂರು, ಟಿಂಕರ್ ಮಂಜಣ್ಣ, ರಘುನಂದನ್ ಅಂಬರ್‌ಕರ್, ಭಾಗ್ಯ ಪಿಸಾಳೆ, ಮಂಜುಳಾ ಇಟ್ಟಿಗೆ ಇತರರು ಭಾಗವಹಿಸಿದ್ದರು.