ಜಿಲ್ಲೆ

ಸಿಎಂ ಕಾರು ಅಡ್ಡಗಟ್ಟಿ ಆಕ್ರೋಶ

ರಮೇಶ ಜಹಗೀರದಾರ್

ದಾವಣಗೆರೆ : ನಗರದ ಸರ್ಕ್ಯೂಟ್ ಹೌಸ್ ಆವರಣದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತಿದ್ದ ವೇಳೆ ನೆಲ, ಜಲ, ಪರಿಸರ ಆಂದೋಲನದ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯ ಅವರ ಕಾರನ್ನು ಅಡ್ಡಗಟ್ಟಿದ ಪ್ರಸಂಗ ನಡೆಯಿತು.  ಸಿಎಂಗೆ ಮನವಿ ನೀಡಲು ವಿವಿಧ ಸಂಘಟನೆಯ ಪದಾಧಿಕಾರಿಗಳು ಸೇರಿದ್ದರು. ಆ ಪೈಕಿ ನೆಲ, ಜಲ, ಪರಿಸರ ಆಂದೋಲನದ ಕಾರ್ಯಕರ್ತರೂ ಇದ್ದರು. ‘ಮನವಿ ನೀಡಲು ಬಂದ ನಮಗೆ ಕೆಲವು ಸಿಬ್ಬಂದಿ ಅಡ್ಡಗಟ್ಟಿದರು, ನಮ್ಮನ್ನು ತಳ್ಳಿದರು. ಇದನ್ನು ಪ್ರತಿಭಟಿಸಿ ಸಿಎಂ ಕಾರಿಗೆ ಅಡ್ಡ ಮಲಗಿದೆ’ ಎಂದು ಸಂಘಟನೆಯ ಮುಖಂಡ ಬಲ್ಲೂರು ರವಿಕುಮಾರ್ ತಿಳಿಸಿದರು. ನಂತರ ಆ ಸಂಘಟನೆಯವರಿಗೆ ಸಮಾಧಾನ ಮಾಡಿ ಕಳಿಸಲಾಯಿತು.  ...