ದಾವಣಗೆರೆ : ನಗರದ ಹೊರ ವಲಯದ ಶಾಮನೂರು ಬ್ರಿಡ್ಜ್ ಬಳಿ ಶನಿವಾರ, ಬ್ಯಾಟರಿ ಶಾರ್ಟ್ ಸರ್ಕಿಟ್‌ನಿಂದ ಕಾರೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಹುಬ್ಬಳ್ಳಿಯ ಕಬಿಲಾನ್ ಎಂಬುವರು ಕುಟುಂಬದ ಸದಸ್ಯರೊಂದಿಗೆ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹಾಸನಕ್ಕೆ ಹೊರಟಿದ್ದರು. ನಗರದ ಹೊರ ವಲಯಕ್ಕೆ ಬಂದಾಗ ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದರು. ಘಟನೆಯಲ್ಲಿ ಯಾವುದೇ ಅಪಾಯವಾಗಿಲ್ಲ. ಕಾರಿನ ಕೆಲವು ಭಾಗಗಳು ಸುಟ್ಟಿವೆ.