ಜಿಲ್ಲೆ

ಹಳೇಬಾತಿಗೆ ನಗರ ಸಾರಿಗೆ ಬಸ್ ಸೇವೆ

ರಮೇಶ ಜಹಗೀರದಾರ್

ದಾವಣಗೆರೆ  : ತಾಲೂಕಿನ ಹಳೇಬಾತಿ ಗ್ರಾಮಕ್ಕೆ ನಗರ ಸಾರಿಗೆ ಬಸ್ ವ್ಯವಸ್ಥೆ ಮಾಡುವ ಮೂಲಕ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಗ್ರಾಮಸ್ಥರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದ್ದಾರೆ.  ದಾವಣಗೆರೆ ರೈಲು ನಿಲ್ದಾಣದಿಂದ ಹಳೇಬಾತಿಗೆ ಬಸ್ ಸಂಚಾರ ವ್ಯವಸ್ಥೆಗೆ ಶುಕ್ರವಾರ ಗ್ರಾಮಸ್ಥರ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.  ಪ್ರತಿನಿತ್ಯ ರೈಲು ನಿಲ್ದಾಣದಿಂದ ಹಳೇಬಾತಿಗೆ ಬೆಳಗ್ಗೆ 7, 8.55, 10.50 ಹಾಗೂ ಮಧ್ಯಾಹ್ನ 12.40, 2.40 ಸಂಜೆ 4 ಕ್ಕೆ ಎವಿಕೆ ಕಾಲೇಜು, ಸಿಜಿ ಆಸ್ಪತ್ರೆ, ಲಕ್ಷ್ಮೀ ಫ್ಲೋರ್ ಮಿಲ್, ಶಾಮನೂರು, ಹೊಸ ಕುಂದುವಾಡ, ಕೆಎಚ್‌ಬಿ ಕಾಲನಿ ಮಾರ್ಗವಾಗಿ ಹಳೇಬಾತಿಗೆ ತಲುಪಲಿದೆ.  ಬಸ್ ಸಂಚಾರ ಆರಂಭಗೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಿಹಿ ವಿತರಣೆ ಮಾಡಿ ಸಂತಸ ವ್ಯಕ್ತಪಡಿಸಿದರು. ಸಿದ್ದೇಶ್ ಎಸ್.ಆರ್, ಶಾಂತಪ್ಪ ಎ.ಎಸ್, ಕೆಂಚಪ್ಪ ಬಿ.ಪಿ, ಶರಣಪ್ಪ ಕೆಂಗೊಳ್, ಪೂಜಾರ್ ರಾಘವೇಂದ್ರ, ಪಂಚಾಕ್ಷರಯ್ಯ ಎಚ್.ಎಂ, ಮಹೇಶ್, ಅನಿಲ್, ಮಂಜಪ್ಪ ಕೆಂಗೊಳ್, ಮಾರುತಿ, ಜಗದೀಶ್ ಇದ್ದರು.