ದಾವಣಗೆರೆ : ವಿದ್ಯಾರ್ಥಿಗಳು ಮುಂದಿನ ದಿನಮಾನಗಳಲ್ಲಿ ಉದ್ಯೋಗ ಮಾಡುವುದಕ್ಕಿಂತ ಮತ್ತೊಬ್ಬರಿಗೆ ಉದ್ಯೋಗ ನೀಡುವ ಚಿಂತನೆ ಬೆಳಸಿಕೊಳ್ಳಿ ಎಂದು ಕೆನರಾ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್‌ನ ಅತಿಥಿ ಉಪನ್ಯಾಸಕ ಅಶೋಕ್ ವಿ. ಜೋಷಿ ಆಶಯ ವ್ಯಕ್ತಪಡಿಸಿದರು.
ನಗರದ ಬಾಪೂಜಿ ಎಂಬಿಎ ಪ್ರೊಗ್ರಾಮ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಜೆಟ್ ಚರ್ಚೆ ಕಾರ್ಯಗಾರದಲ್ಲಿ ಮಾತನಾಡಿ, ಯುವ ಪೀಳಿಗೆ ಆಧುನಿಕ ತಂತ್ರಜ್ಞಾನ ಕೃತಕ ಬುದ್ಧಿಮತ್ತೆಯ ಕುರಿತು ಆಳವಾಗಿ ಅಧ್ಯಯನ ಮಾಡಿದರೆ ಉದ್ಯೋಗ ಪಡೆಯಲು ಸುಲಭವಾಗುತ್ತದೆ. ಆದ್ದರಿಂದ ಇಂತಹ ಕೌಶಲಕ್ಕೆ ಹೆಚ್ಚಿನ ಆಸಕ್ತಿ ನೀಡುವುದು ಬಹುಮುಖ್ಯ ಎಂದು ಹೇಳಿದರು.
ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಕೆ.ಬಿ. ರಂಗಪ್ಪ ಮಾತನಾಡಿ, ಜಿಡಿಪಿ ಅಂಕಿ ಅಂಶಗಳು ಒಳಗೊಂಡಂತೆ ವಿವಿಧ ವಲಯಗಳ ಬೆಳವಣಿಗೆ ಕುರಿತು ತಮ್ಮ ಅನಿಸಿಕೆಯನ್ನು ತಿಳಿಸಿದರು.
ಎಂಬಿಎ ಕಾಲೇಜಿನ ಅಧ್ಯಕ್ಷ ಡಾ.ಅಥಣಿ ಎಸ್. ವೀರಣ್ಣ ಮಾತನಾಡಿ, ಇಂದು ಭಾರತ ಸಾರ್ವಭೌಮ ಹಾಗೂ ಅಭಿವೃದ್ಧಿ ಪತದಲ್ಲಿ ಸಾಗಲು 1991-96ರ ಅವಧಿಯ ಹಣಕಾಸು ಸಚಿವ ಮನಮೋಹನ್ ಸಿಂಗ್ ಪ್ರಸ್ತುತ ಪಡಿಸಿದ ಎಲ್‌ಪಿಜಿ ಪಾಲಸಿಯ ಕಾರಣದಿಂದ ಭಾರತವು ಪ್ರಚಂಡ ಅಭಿವೃದ್ಧಿಯನ್ನು 1991-96ರ ಅವಧಿಯಲ್ಲಿ ಸಾಧಿಸಿದೆ ಎಂದು ಹೇಳಿದರು.
ಚೆಂಬರ್ಸ್ ಆಫ್ ಕಾಮರ್ರ್ಸ್‌ನ ಅಧ್ಯಕ್ಷ ಅಜ್ಜಂಪುರ ಶೆಟ್ರು ಶಂಭುಲಿಂಗಪ್ಪ, ಕಾಲೇಜಿನ ನಿರ್ದೇಶಕ ಡಾ. ಎಚ್.ವಿ. ಸ್ವಾಮಿ ತ್ರಿಭುವಾನಂದ, ಡಿಐಸಿ ಮತ್ತು ಎಂಎಸ್‌ಎಂಇ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.