ದಾವಣಗೆರೆ : ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂದಿರ ಆವರಣದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಅಧಿವೇಶನದ ಅಂಗವಾಗಿ ಹಾಕಿದ್ದ ಮಳಿಗೆಗಳಲ್ಲಿ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸ್ವತ್ವ, ಭಾರತೀಯತೆ, ರಾಷ್ಟ್ರೀಯತೆ ವಿಚಾರಗಳನ್ನು ಬಿಂಬಿಸುವ, ಹಲವು ಚಿಂತಕರು, ಲೇಖಕರು ಬರೆದ ಕೃತಿಗಳು ಅಲ್ಲಿದ್ದವು. ಜತೆಗೆ ನಾಡಿನ ಖ್ಯಾತ ಸಾಹಿತಿಗಳ ಪುಸ್ತಕಗಳ ಭಂಡಾರವೇ ಇತ್ತು. ಆಸಕ್ತರು ಮಳಿಗೆಗಳಿಗೆ ಭೇಟಿ ನೀಡಿ ತಮ್ಮ ಇಷ್ಟದ ಲೇಖಕರ ಕೃತಿಗಳನ್ನು ಖರೀದಿಸುವುದು ಕಂಡುಬಂದಿತು. ಸ್ಥಳೀಯ ಕಲಾವಿದರು ರಚಿಸಿದ ಚಿತ್ರಗಳನ್ನೂ ಪ್ರದರ್ಶಿಸಲಾಯಿತು. ಖಾದಿ ಬಟ್ಟೆಗಳು ಇನ್ನಿತರ ವಸ್ತುಗಳ ಮಾರಾಟದ ಮಳಿಗೆಗಳೂ ಇದ್ದವು.