ಜಿಲ್ಲೆ

ಆಕಾಶ ನೋಡಲು ನೂಕುನುಗ್ಗಲೇಕೆ?

ರಮೇಶ ಜಹಗೀರದಾರ್

ದಾವಣಗೆರೆ :  ‘ಯಾರು ಏನು ಬೇಕಾದರೂ ಮಾಡಬಹುದು, ಆಕಾಶ ನೋಡಲು ನೂಕುನುಗ್ಗಲು ಬೇಕಿಲ್ಲ’ ಎಂದು ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.  ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ವೀರಶೈವ ಲಿಂಗಾಯತ ಒಳಪಂಗಡಗಳ ಪ್ರಮುಖರ ಸಭೆಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.  ನಾನು ಎಲ್ಲ ಜನಾಂಗದ ಮುಖಂಡ. ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿರುವ ಸಮಾವೇಶಕ್ಕೆ ನನ್ನನ್ನು ಕರೆದರೆ ಹೋಗುತ್ತೇನೆ. ಕರೆಯಲು ದಮ್ಮು ಬೇಕಲ್ಲ ಎಂದು ಕಾಲೆಳೆದರು.  ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆಯ ಕುರಿತ ಪ್ರಶ್ನೆಗೆ ಉತ್ತರಿಸಿ, ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ತಾವು ಬದ್ಧ ಎಂದು ಹೇಳಿದರು.