ಜಿಲ್ಲೆ

ಸಂಸದರ ನೇತೃತ್ವದಲ್ಲಿ ಬಿಜೆಪಿ ನಿಯೋಗ

ರಮೇಶ ಜಹಗೀರದಾರ್

ದಾವಣಗೆರೆ : ಹಿಂದಿನ ತೀರ್ಮಾನದಂತೆ ಭದ್ರಾ ನಾಲೆಗಳಲ್ಲಿ ಸತತ ನೂರು ದಿನಗಳ ಕಾಲ ನೀರು ಹರಿಸುವಂತೆ ಸಂಸದ ಜಿ.ಎಂ.ಸಿದ್ದೇಶ್ವರ ನೇತೃತ್ವದ ಜಿಲ್ಲಾ ಬಿಜೆಪಿ ಘಟಕದ ನಿಯೋಗವು ಗುರುವಾರ ಬೆಂಗಳೂರಿನಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
 ಭದ್ರಾ ಜಲಾಶಯದಿಂದ ಆಗಸ್ಟ್ 10 ರಿಂದ ನಾಲೆಗಳಲ್ಲಿ ಸತತ ನೂರು ದಿನಗಳ ಕಾಲ ನೀರು ಹರಿಸಲು ಭದ್ರಾ ಯೋಜನಾ ಸಲಹಾ ಸಮಿತಿಯಲ್ಲಿ ತೀರ್ಮಾನಿಸಿದ ಹಿನ್ನೆಲೆಯಲ್ಲಿ ಅಚ್ಚುಕಟ್ಟು ರೈತರು ಭತ್ತದ ನಾಟಿ ಮಾಡಿದ್ದಾರೆ. ಭತ್ತ ಹೂವಾಗುವ ಸಂದರ್ಭದಲ್ಲಿ ನಾಲೆಯಲ್ಲಿ ನೀರು ನಿಲ್ಲಿಸುವ ತೀರ್ಮಾನ ಕೈಗೊಂಡರೆ ರೈತರಿಗೆ ಸಾಕಷ್ಟು ಅನಾನುಕೂಲವಾಗಲಿದೆ ಎಂದು ನಿಯೋಗವು ಸಚಿವರಿಗೆ ತಿಳಿಸಿತು.
 ಮನವಿ ಸ್ವೀಕರಿಸಿದ ಸಚಿವ ಡಿ.ಕೆ.ಶಿವಕುಮಾರ್ ಅವರು ಭದ್ರಾ ಜಲಾಶಯದ ಅಚ್ಚುಕಟ್ಟುದಾರರಿಗೆ ಯಾವುದೇ ಅನಾನುಕೂಲವಾಗದ ರೀತಿ ಈ ಹಿಂದಿನ ತೀರ್ಮಾನದಂತೆ ನೂರು ದಿನಗಳ ಕಾಲ ನೀರು ಹರಿಸಲು ಸಂಬಂಧಿಸಿದವರಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ತಿಳಿಸಿದ್ದಾರೆ.
 ನಿಯೋಗದಲ್ಲಿ ಶಾಸಕ ಬಿ.ಪಿ.ಹರೀಶ್, ವಿಧಾನಪರಿಷತ್ ಸದಸ್ಯ ನವೀನ್, ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಎಸ್.ಎಂ.ವೀರೇಶ್ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ್, ರೈತಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್, ಮುಖಂಡರಾದ ಕೊಳೇನಹಳ್ಳಿ ಬಿ.ಎಂ.ಸತೀಶ್, ಶ್ಯಾಗಲೆ ದೇವೇಂದ್ರಪ್ಪ, ಧನಂಜಯ ಕಡ್ಲೆಬಾಳ್, ಬಾತಿ ವೀರೇಶ್ ದೊಗ್ಗಳ್ಳಿ, ಬಾತಿ ಶಿವಕುಮಾರ್ ಇತರರು ಇದ್ದರು.
 ----
 ಚಿತ್ರ : ಡಿವಿಜಿ ಎಂಪಿ 12
 ಭದ್ರಾ ನಾಲೆಗಳಲ್ಲಿ ಸತತ ನೂರು ದಿನ ನೀರು ಹರಿಸುವಂತೆ ಸಂಸದ ಜಿ.ಎಂ.ಸಿದ್ದೇಶ್ವರ ನೇತೃತ್ವದ ಜಿಲ್ಲಾ ಬಿಜೆಪಿ ನಿಯೋಗವು ಗುರುವಾರ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ಶಾಸಕ ಬಿ.ಪಿ.ಹರೀಶ್, ವಿಧಾನಪರಿಷತ್ ಸದಸ್ಯ ನವೀನ್, ಎಸ್.ಎಂ.ವೀರೇಶ್ ಹನಗವಾಡಿ, ಬಿ.ಎಸ್.ಜಗದೀಶ್ ಇತರರು ಇದ್ದರು.
 ----
 ಬಾಕ್ಸ್
 ಸಚಿವ ಮಧು ಬಂಗಾರಪ್ಪ ಭೇಟಿ ಮಾಡಿದ ರೈತರು
 ವಿಜಯವಾಣಿ ಸುದ್ದಿಜಾಲ ದಾವಣಗೆರೆ
 ಆನ್ ಆ್ಯಂಡ್ ಆಫ್ ಪದ್ಧತಿ ಕೈ ಬಿಟ್ಟು ಭದ್ರಾ ಜಲಾಶಯದಿಂದ ನಿರಂತರ ನೀರು ಹರಿಸುವಂತೆ ಆಗ್ರಹಿಸಿ ಭಾರತೀಯ ರೈತ ಒಕ್ಕೂಟ ಹಾಗೂ ರೈತ ಮುಖಂಡರು ಗುರುವಾರ ಶಿವಮೊಗ್ಗ ಜಿಲ್ಲೆ ಸೊರಬದಲ್ಲಿ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
 ಭದ್ರಾ ಅಚ್ಚುಕಟ್ಟಿನಲ್ಲಿ 62 ಸಾವಿರ ಹೆಕ್ಟೇರ್ ಭತ್ತ ನಾಟಿ ಮಾಡಲಾಗಿದೆ. ನೀರು ಬಂದ್ ಮಾಡಿ ಬಿಡುವುದರಿಂದ ಬೆಳೆಗಳು ಒಣಗುತ್ತವೆ. ಆದ್ದರಿಂದ ನಿರಂತರವಾಗಿ ನೀರು ಹರಿಸುವಂತೆ ರೈತರು ಆಗ್ರಹಿಸಿದರು.
 ರೈತ ಮುಖಂಡರಾದ ಶಾಮನೂರು ಲಿಂಗರಾಜ್, ನಾಗೇಶ್ವರ್‌ರಾವ್, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಜಿ. ಗಣೇಶಪ್ಪ, ಮಾಜಿ ಮೇಯರ್ ಎಚ್.ಎನ್. ಗುರುನಾಥ್, ಮುಖಂಡರಾದ ಶಿರಮಗೊಂಡನಹಳ್ಳಿ ಮಂಜಣ್ಣ, ಜಮ್ಮಿ ಹನುಮಂತಪ್ಪ, ಕುಂದುವಾಡ ಮಹೇಶಪ್ಪ, ಪುನೀತ್ ಕುಂದುವಾಡ, ದ್ಯಾವಪ್ಪ ರೆಡ್ಡಿ ಇದ್ದರು.