ದಾವಣಗೆರೆ : ಜಿಲ್ಲಾದ್ಯಂತ ಶನಿವಾರ ಹನುಮ ಜಯಂತಿಯನ್ನು ಭಕ್ತಿ, ಸಂಭ್ರಮದಿಂದ ಆಚರಿಸಲಾಯಿತು. ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಮೆರವಣಿಗೆ, ಅನ್ನಸಂತರ್ಪಣೆ ಮುಂತಾದ ಕಾರ್ಯಕ್ರಮಗಳು ನಡೆದವು. ನಗರದ ವಿವಿಧೆಡೆ ಭಕ್ತರು ಪಾನಕ, ಕೋಸಂಬರಿ ವ್ಯವಸ್ಥೆ ಮಾಡಿದ್ದರು. ನಗರದ ಶ್ರೀ ನಾಟ್ಯ ಗಣಪತಿ ಸೇವಾ ಸಮಿತಿ ಮತ್ತು ಭಕ್ತ ಮಂಡಳಿ ಟ್ರಸ್ಟ್ ವತಿಯಿಂದ ದೇವಸ್ಥಾನ ಆವರಣದಲ್ಲಿ ಪದ್ಮಾಸನ ಹನುಮ ಜಯಂತಿ ಆಚರಿಸಲಾಯಿತು. ತೊಟ್ಟಿಲು ಕಾರ್ಯಕ್ರಮದಲ್ಲಿ ‘ಪದ್ಮಾಸನ ಆಂಜನೇಯ ಸ್ವಾಮಿ’ ಎಂದು ಹೆಸರಿಡಲಾಯಿತು. ನಂತರ ಪಾನಕ, ಕೋಸಂಬರಿ ಪ್ರಸಾದ ವಿತರಿಸಲಾಯಿತು. ಟ್ರಸ್ಟ್ನ ಅಧ್ಯಕ್ಷ ಡಾ. ಸುರೇಶ್ ಬಾಬು, ಕಾರ್ಯದರ್ಶಿ ಡಾ. ಕೆ.ಎಸ್. ಗಂಗಾಧರ, ಖಜಾಂಚಿ ಬಿ.ವಿ. ರಾಜಶೇಖರ, ಸಾಗರ್ ಪಿ. ತೌಡೂರ್, ಮಾಧುರಿ ವ್ಯಾಸರಾಜ್, ನಂಜುಂಡಮ್ಮ ವೀರಾಚಾರ್, ಕೆ.ಎಂ. ವೀರೇಶ್, ಗೋಪಿ, ಚಂದ್ರು, ಪೈಂಟರ್ ಮೇಸ್ತ್ರಿ ನಾಗರಾಜ್, ಅರ್ಚಕರಾದ ನಾಗಲಿಂಗಯ್ಯ ಹಿರೇಮಠ್, ರಾಜಣ್ಣ ಮತ್ತು ಭಕ್ತಾದಿಗಳು ಪಾಲ್ಗೊಂಡಿದ್ದರು. ಜಯದೇವ ವೃತ್ತದ ಬಳಿ ಇರುವ ದತ್ತಾತ್ರೇಯ ಅಧ್ಯಾತ್ಮ ಮಂದಿರ ಸೇರಿದಂತೆ ಹಲವಾರು ದೇವಸ್ಥಾನಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ...